×
Ad

ಜಮಾಅತೆ ಇಸ್ಲಾಮ್ ವತಿಯಿಂದ ಉಸ್ತಾದರಿಗೆ ಕಿಟ್ ವಿತರಣೆ

Update: 2020-08-27 20:45 IST

ಮಂಗಳೂರು, ಆ. 27: ಕೊರೋನ-ಲಾಕ್‌ಡೌನ್‌ನಿಂದಾಗಿ ಕಳೆದ ಐದಾರು ತಿಂಗಳಿನಿಂದ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದಿರುವ ಸುಮಾರು 38 ಉಸ್ತಾದರ ಮನೆಬಾಗಿಲಿಗೆ ಬೋಳಂಗಡಿಯ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿಯ ನೇತೃತ್ವದಲ್ಲಿ ತಲಾ 2 ಸಾವಿರ ರೂ. ಮೌಲ್ಯದ ಆಹಾರ ಸಾಮಗ್ರಿಯ ಕಿಟ್‌ನ್ನು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು (ಸಮಾಜ ಸೇವಾ ಘಟಕ) ವತಿಯಿಂದ ವಿತರಿಸಲಾಯಿತು.

ಮಸೀದಿ-ಮದ್ರಸಗಳಲ್ಲಿ ದುಡಿಯುವ ಉಸ್ತಾದರುಗಳನ್ನು ಗುರುತಿಸಿ ಹಮ್ಮಿಕೊಂಡ ಯೋಜನೆ ಇದಾಗಿದೆ. ಕೆಲವು ಮಸೀದಿಯ ಕಮಿಟಿಯು ಉಸ್ತಾದರಿಗೆ ಅರ್ಧ ಸಂಬಳ ನೀಡಿದ್ದರೆ ಇನ್ನು ಕೆಲವು ಕಮಿಟಿಯವರು ಲಾಕ್‌ಡೌನ್ ಸಂದರ್ಭ ಮನೆಗೆ ಕಳುಹಿಸಿ ಕೊಟ್ಟು ಅವರಿಗೆ ವೇತನ ಅಥವಾ ಆಹಾರ ಸಾಮಗ್ರಿಯ ಕಿಟ್ ವಿತರಿಸಿರಲಿಲ್ಲ. ಅದನ್ನು ಮನಗಂಡು ಯಹ್ಯಾ ತಂಙಳ್ ಅವರು ಜಮಾಅತೆ ಇಸ್ಲಾಮೀ ಹಿಂದ್ ಮೂಲಕ ಆಹಾರ ಸಾಮಗ್ರಿಯ ಕಿಟ್ ವಿತರಣೆಯ ವ್ಯವಸ್ಥೆ ಕಲ್ಪಿಸಿಕೊಟ್ಟು ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News