ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ನ್ಯಾಯವಾದಿ ಮೃತ್ಯು
Update: 2020-08-28 11:40 IST
ಮಂಗಳೂರು, ಆ. 28: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನ್ಯಾಯವಾದಿ ಬಿಎಂ ದುಗ್ಗಪ್ಪ ಶುಕ್ರವಾರ ಮುಂಜಾವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಳ್ಯ ಮೂಲದ ಇವರು ನಗರದ ಆಕಾಶಭವನ ಬಳಿ ನೆಲೆಸಿದ್ದರು. ಬುಧವಾರ ಸಂಜೆ ಸುಮಾರು 4:30ರ ವೇಳೆಗೆ ತನ್ನ ಮನೆಯಿಂದ ಬೆಸೆಂಟ್ ಶಿಕ್ಷಣ ಸಂಸ್ಥೆಯ ಬಳಿ ಇರುವ ಕಚೇರಿಗೆ ತೆರಳುತ್ತಿದ್ದಾಗ ಇವರು ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾವ ಮೃತಪಟ್ಟರು.
ಇವರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಂಗಳೂರು ವಕೀಲ ಸಂಘದ ಸದಸ್ಯರಾಗಿದ್ದ ಇವರ ಅಂತ್ಯ ಸಂಸ್ಕಾರವು ಶನಿವಾರ ಹುಟ್ಟೂರಲ್ಲಿ ನಡೆಯಲಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.