×
Ad

ಪುತ್ತೂರು, ಕಡಬ: 29 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2020-08-28 12:42 IST

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶುಕ್ರವಾರ ಒಟ್ಟು 29 ಮಂದಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 611 ಕೊರೋನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಪುತ್ತೂರು ತಾಲೂಕಿನ ತಿಂಗಳಾಡಿ ನಿವಾಸಿ 31 ವರ್ಷದ ಪುರುಷ, ಕೋಡಿಂಬಾಡಿ ನಿವಾಸಿ 35 ವರ್ಷದ ಪುರುಷ, 28 ವರ್ಷದ ಯುವಕ, ಅರಿಯಡ್ಕ ನಿವಾಸಿ 31 ವರ್ಷದ ಮಹಿಳೆ, ಉಪ್ಪಿನಂಗಡಿ ನಿವಾಸಿ 29 ವರ್ಷದ ಪುರುಷ, ಚಿಕ್ಕಮುಡ್ನೂರು ನಿವಾಸಿ 52 ವರ್ಷದ ಪುರುಷ, ಕುರಿಯ ನಿವಾಸಿ 43 ವರ್ಷದ ಪುರುಷ, ಸಂಪ್ಯ ನಿವಾಸಿಗಳಾದ 27 ವರ್ಷ ಮತ್ತು 70 ವರ್ಷದ ಮಹಿಳೆಯರು, ಸರ್ವೆ ನಿವಾಸಿ 32 ವರ್ಷದ ಪುರುಷ, ಮಾಡಾವು ನಿವಾಸಿ 40 ವರ್ಷದ ಪುರುಷರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ.

ನಗರಸಭಾ ವ್ಯಾಪ್ತಿಯ ಕೂರ್ನಡ್ಕ ನಿವಾಸಿ 22 ವರ್ಷದ ಯುವಕ, ಹಾರಾಡಿ ನಿವಾಸಿ 37 ವರ್ಷದ ಪುರುಷ, ಪಡೀಲು ನಿವಾಸಿಗಳಾದ 48 ವರ್ಷದ ಪುರುಷ ಮತ್ತು 23 ವರ್ಷದ ಯುವತಿ, ಕೆಮ್ಮಿಂಜೆ ನಿವಾಸಿಗಳಾದ 31 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆ, ಸೂತ್ರಬೆಟ್ಟು ನಿವಾಸಿಗಳಾದ 43 ವರ್ಷದ ಮಹಿಳೆ ಹಾಗೂ ಮುಕ್ರಂಪಾಡಿ ನಿವಾಸಿ 45 ವರ್ಷದ ಪುರುಷರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಕಡಬ ತಾಲೂಕು ವ್ಯಾಪ್ತಿಯ ಆಲಂಕಾರು ನಿವಾಸಿ 32 ವರ್ಷದ ಪುರುಷ, ರಾಮಕುಂಜ ನಿವಾಸಿ 49 ವರ್ಷದ ಮಹಿಳೆ, ಪೆರಾಬೆ ನಿವಾಸಿ 53 ವರ್ಷದ ಪುರುಷ, ಗೋಳಿತೊಟ್ಟು ನಿವಾಸಿ 29 ವರ್ಷದ ಮಹಿಳೆ, ಕಡಬ ನಿವಾಸಿ 48 ವರ್ಷದ ಪುರುಷ, ಕುಟ್ರುಪ್ಪಾಡಿ ನಿವಾಸಿ 80 ವರ್ಷದ ವೃದ್ಧ, ಕೈಮಣ ನಿವಾಸಿ ನಿವಾಸಿ 52 ವರ್ಷದ ಪುರುಷ, ಬೆಳಂದೂರು ನಿವಾಸಿ 46 ವರ್ಷದ ಮಹಿಳೆ ಹಾಗೂ ಪುಣ್ಚಪ್ಪಾಡಿ ನಿವಾಸಿ 21 ವರ್ಷದ ಯುವತಿಯಲ್ಲಿ ಕೊರೋನ ಪಾಸಿಟಿವ್ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News