ಸುಶಾಂತ್ ಸಿಂಗ್ ಸಾವಿನ ಪ್ರಕರಣ: ರಿಯಾ ಚಕ್ರವರ್ತಿಗೆ 10 ಪ್ರಶ್ನೆ ಕೇಳಿದ ಸಿಬಿಐ
Update: 2020-08-28 13:41 IST
ಹೊಸದಿಲ್ಲಿ, ಆ.28: ಅನೇಕ ಏಜೆನ್ಸಿಗಳಿಂದ ನಡೆಯುತ್ತಿರುವ ತನಿಖೆಯಿಂದ ಅಸಹನೀಯ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಮಾಧ್ಯಮಗಳ ಮುಂದೆ ದುಃಖ ತೋರಿಕೊಂಡ ಮರುದಿನವೇ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಟಿ ರಿಯಾ ಚಕ್ರವರ್ತಿಗೆ ಶುಕ್ರವಾರ ಸಿಬಿಐ 10 ಪ್ರಶ್ನೆಗಳನ್ನು ಕೇಳಿದೆ.
ರಿಯಾ ಅವರ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಯಾ ಹಾಗೂ ಆಕೆಯ ಕುಟುಂಬ ಸುಶಾಂತ್ ಸಿಂಗ್‌ಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಆತನ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ್ದಾರೆ. ಸಿಂಗ್ ಸಾವಿನಲ್ಲಿ ಈಕೆ ಇರುವ ಸಾಧ್ಯತೆಯಿದೆ ಎಂದು ಸಿಂಗ್ ಕುಟುಂಬದ ಆರೋಪದ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ರಿಯಾ ಅವರ ಸಹೋದರ ಸೌಕಿತ್‌ರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ರಿಯಾಗೆ 10 ಪ್ರಶ್ನೆಗಳನ್ನು ಸಿಬಿಐ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಸುಶಾಂತ್ ಸಾವನ್ನಪ್ಪುವ ಆರು ದಿನಗಳ ಮೊದಲು ರಿಯಾ ಆತನ ಮನೆಯನ್ನು ತೊರೆದಿದ್ದರು.