×
Ad

ಕಾರ್ಕಳ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ: ಕೆವಿಡ್-19 ಮಾದರಿ ಸಂಗ್ರಹ ಸೌಲಭ್ಯ

Update: 2020-08-28 18:12 IST

ಮಣಿಪಾಲ, ಆ.28: ಸಾರ್ವಜನಿಕರ ಅನುಕೂಲತೆಗಾಗಿ ಕಾರ್ಕಳದ ಡಾ.ಟಿ ಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಕೋವಿಡ್-19ಕ್ಕಾಗಿ ಗಂಟಲುದ್ರವ ಮಾದರಿ ಸಂಗ್ರಹ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಾರಿ ಡಾ.ಕೀರ್ತಿನಾಥ ಬಲ್ಲಾಳ್ ತಿಳಿಸಿದ್ದಾರೆ.

ಈಗ ವಿದೇಶ ಪ್ರಯಾಣ ಮಾಡುವವರಿಗೆ ಕೋವಿಡ್-19 ಪರೀಕ್ಷಾ ವರದಿ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಮನವಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಹಾಯ ಮಾಡಲು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಯಲ್ಲಿ ಕೋವಿಡ್-19 ಮಾದರಿ ಸಂಗ್ರಹ ಸೌಲಭ್ಯ ವನ್ನು ಆರಂಭಿಸಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಪ್ರಯೋಜನವನ್ನು ಸಾರ್ವಜನಿಕರು ಮತ್ತು ವಿದೇಶ ಪ್ರಯಾಣ ಮಾಡುವವರು ಪಡೆದುಕೊಳ್ಳಬಹುದು. ಈ ಸೇವೆ ಪೂರ್ವ ನಿಗದಿಯೊಂದಿಗೆ (ಅಪಾಂಟ್‌ಮೆಂಟ್) ಮಾತ್ರ ಲಭ್ಯವಿದ್ದು, ಇದಕ್ಕಾಗಿ ಬೆಳಗ್ಗೆ 9:00ರಿಂದ ಸಂಜೆ 4:00ರವರೆಗೆ ದೂರವಾಣಿ ಸಂಖ್ಯೆ:8660399689ಕ್ಕೆ ಕರೆ ಮಾಡುವಂತೆ ಡಾ. ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News