×
Ad

ಸಾಲ್ಮರ: ಎಸ್‍ಡಿಪಿಐ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ, ಸರಕಾರಿ ಯೋಜನೆಗಳ ಮಾಹಿತಿ ಶಿಬಿರ

Update: 2020-08-28 18:15 IST

ಪುತ್ತೂರು,ಆ.28: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಾಲ್ಮರ ವಲಯ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ ಹಾಗೂ ಸರಕಾರಿ ಯೋಜನೆಗಳ ಮಾಹಿತಿ ಶಿಬಿರ ಕಾರ್ಯಕ್ರಮವು ಕೆರೆಮೂಲೆ ಜಂಕ್ಷನ್ ನಲ್ಲಿ ನಡೆಯಿತು.

ಶಿಬಿರವನ್ನು ಸಾಲ್ಮರ ಸೈಯ್ಯದ್ ಮಲೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಸುಲೈಮಾನ್ ಹಾಜಿ ಸಾಲ್ಮರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಹಂಝ ಕೆರೆಮೂಲೆ, ಕೆ.ವಿ.ಟಿ ಸ್ಟೋರ್ ಮಾಲಕ ಯೂಸುಫ್ ಕೆರೆಮೂಲೆ, ರಝಾಕ್ ಜನತಾ, ಸಾಲ್ಮರ ಸೈಯ್ಯದ್ ಮಲೆ ಜುಮಾ ಮಸೀದಿಯ ಸದಸ್ಯರಾದ ಉಮ್ಮರ್ ಕೆರೆಮೂಲೆ, ಯುವ ಉದ್ಯಮಿ ಜುನೈದ್ ಮುದ್ದೋಡಿ, ಖುವ್ವತ್ತುಲ್ ಇಸ್ಲಾಂ ಯಂಗ್ ಮೆನ್ಸ್ ಸಾಲ್ಮರ ಮಾಜಿ ಅಧ್ಯಕ್ಷ ಸಿದ್ದೀಕ್ ತಾರಿಗುಡ್ಡೆ, ನವಾಝ್ ಪಿ ಎಸ್, ಎಸ್‍ಡಿಪಿಐ ನಗರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಲತೀಫ್ ಸಾಲ್ಮರ ಉಪಸ್ಥಿತರಿದ್ದರು.

ನೌಫಲ್ ಸಾಲ್ಮರ ಕೆ.ಎಸ್ಎ ಸ್ವಾಗತಿಸಿ, ರಶೀದ್ ಕೆರೆಮೂಲೆ ವಂದಿಸಿದರು. ಎಸ್‍ಡಿಪಿಐ ಸಾಲ್ಮರ ವಲಯಾಧ್ಯಕ್ಷ ಉಸ್ಮಾನ್ ಕೆರೆಮೂಲೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News