×
Ad

ಕಾಸರಗೋಡು - ಸುಳ್ಯ ನಡುವಿನ ರಸ್ತೆ ತೆರೆಯಲು ಒತ್ತಾಯಿಸಿ ಪ್ರತಿಭಟನೆ

Update: 2020-08-28 18:31 IST

ಕಾಸರಗೋಡು :   ಹೈಕೋರ್ಟ್ ನ ಮಧ್ಯಂತರ ಆದೇಶ ವಿದ್ದರೂ ತೆರೆಯದ ಕಾಸರಗೋಡು - ಸುಳ್ಯ ನಡುವಿನ ಜಾಲ್ಸೂ ರು ರಸ್ತೆಯನ್ನು ಪ್ರತಿಭಟನೆ ನಡೆಸಿ ಪೊಲೀಸರಿಂದ ತೆರವುಗೊಳಿಸಿದ ಘಟನೆ ಇಂದು ನಡೆದಿದೆ.

ಜಾಲ್ಸೂ ರು ರಸ್ತೆಯ  ಕೊಟ್ಯಾಡಿಯಲ್ಲಿ  ಮರದ ತುಂಡು ಹಾಗೂ ಹಗ್ಗಗಳನ್ನು ಕಟ್ಟಿ ರಸ್ತೆ ಬಂದ್ ಮಾಡಲಾಗಿತ್ತು . ಹೈಕೋರ್ಟ್ ಆದೇಶದಂತೆ ಗುರುವಾರ ಬೆಳಗ್ಗೆ 10 ಗಂಟೆಗೆ ಮೊದಲು ಈ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಬೇಕಿತ್ತು . ಆದರೆ  ಇಂದು  ಶುಕ್ರವಾರ 11. 30 ಕಳೆದರೂ ತೆರೆಯದಿರುವುದರಿಂದ  ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು .

ಪ್ರತಿಭಟನೆ ಹಿನ್ನಲೆಯಲ್ಲಿ  ಅಧಿಕಾರಿಗಳು ನಡೆಸಿದ ಮಾತುಕತೆಯಿಂದ ರಸ್ತೆ ತೆರವುಗೊಳಿಸಲು , ಗಡಿಯ ಕಾರಡ್ಕ , ದೇಲಂಪಾಡಿ , ಬೆಳ್ಳೂರು  ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ಗುರುತು ಚೀಟಿ ತೋರಿಸಿ ಸಂಚರಿಸಲು ಅನುಮತಿ ನೀಡುವುದಾಗಿ ಭರವಸೆ ನೀಡಿದರು . ಉಳಿದವರು  ಕೋವಿಡ್  ಜಾಗ್ರತಾ ಪೋರ್ಟಲ್ ನಲ್ಲಿ  ನೋಂದಾವಣೆ ಮಾಡಿ ಸಂಚಾರ ನಡೆಸಬಹುದು ಎಂಬ ಭರವಸೆ ಹಿನ್ನಲೆಯಲ್ಲಿ  ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು .

ಪ್ರತಿಭಟನೆಯನ್ನು  ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್  ಉದ್ಘಾಟಿಸಿದರು . ಬಿಜೆಪಿ ರಾಷ್ಟೀಯ ಸಮಿತಿ ಸದಸ್ಯೆ ಪ್ರಮೀಳಾ  ಸಿ . ನಾಯ್ಕ್ , ಸುಕು ಮಾರ್ ಕುದ್ರೆಪ್ಪಾಡಿ ,  ಜಿಲ್ಲಾ ಉಪಾಧ್ಯಕ್ಷೆ ಎಂ . ,ಜನನಿ , ಯುವ ಮೋರ್ಚಾ ಜಿಲ್ಲಾಧ್ಯಕ್ಷ  ಧನಂಜಯ ಮಧೂರು ,  ಹರೀಶ್ ಗೋಸಾಡ , ವಸಂತ ಕೆ .,  ಪಿ .ಆರ್ ಸುನಿಲ್ , ರಕ್ಷಿತ್ ಕೆದಿಲಾಯ  ಮೊದಲಾದವರು ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News