×
Ad

ಉಡುಪಿ: 11 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-08-28 19:01 IST

ಉಡುಪಿ, ಆ. 28: ಜಿಲ್ಲೆಯಲ್ಲಿ ನೋವೆಲ್ ಕೊರೋನ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಶುಕ್ರವಾರ 11 ಸಾವಿರವನ್ನು ದಾಟಿ ಮುಂದೆ ಸಾಗಿದೆ. ಇಂದು ಜಿಲ್ಲೆಯ 174 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 11,087ನ್ನು ಮುಟ್ಟಿದೆ. ದಿನದಲ್ಲಿ ಒಟ್ಟು 600 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಪತ್ತೆಯಾದ 174 ಮಂದಿಯಲ್ಲಿ ಉಡುಪಿ ತಾಲೂಕಿನ 67 ಮಂದಿ, ಕುಂದಾಪುರ ತಾಲೂಕಿನ 85 ಹಾಗೂ ಕಾರ್ಕಳ ತಾಲೂಕಿನ 13 ಮಂದಿ ಸೇರಿದ್ದು, ಉಳಿದಂತೆ ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಜಿಲ್ಲೆಗೆ ಬಂದ ಒಂಭತ್ತು ಮಂದಿಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಮಕ್ಕಳು ಸೇರಿದಂತೆ 97 ಮಂದಿ ಪುರುಷರು ಹಾಗೂ 77 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 48 ಮಂದಿ ಪುರುಷರು ಹಾಗೂ 57 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ ಎಂದು ಡಾ.ಸೂಡ ವಿವರಿಸಿದರು.

ಪಾಸಿಟಿವ್ ದೃಢಗೊಂಡ 174 ಮಂದಿಯಲ್ಲಿ 93 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 58 ಮಂದಿ ಶೀತಜ್ವರದಿಂದ, ನಾಲ್ವರು ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ದೇಶೀಯ ಪ್ರವಾಸ ಮರಳಿದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ 18 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.

187 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಇಂದು 187 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 47ಮಂದಿ ಕೋವಿಡ್ ಆಸ್ಪತ್ರೆಗಳಿಂದ, 140 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖ ರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿ ನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 8384ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2608 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1159 ಮಂದಿ ವಿವಿಧ ಆಸ್ಪತ್ರೆ ಗಳಲ್ಲಿ ಹಾಗೂ 1449 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆುುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

515  ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶುಕ್ರವಾರ ಒಟ್ಟು 515 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 253 ಮಂದಿ, ಕೋವಿಡ್ ಸಂಪರ್ಕಿತರು 98 ಮಂದಿ ಇದ್ದರೆ, ಉಸಿರಾಟ ತೊಂದರೆಯ 8 ಮಂದಿ, ಶೀತಜ್ವರ ದಿಂದ ಬಳಲುವ 57 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 99 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ. ಸೂಡ ತಿಳಿಸಿದರು.

ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 69,302ಕ್ಕೇರಿದೆ. ಇವುಗಳಲ್ಲಿ ಈವರೆಗೆ 57,691 ನೆಗೆಟಿವ್, 11087 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 95 ಮಂದಿ ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಇನ್ನು ಒಟ್ಟು 524 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.

ಇಬ್ಬರು ಮೃತ್ಯು: ಜಿಲ್ಲೆಯಲ್ಲಿ ನಿನ್ನೆ ಉಡುಪಿಯ ಇಬ್ಬರು ಕೊರೋನ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. 57 ವರ್ಷ ಪ್ರಾಯದ ಪುರುಷರು ಉಸಿರಾಟ ತೊಂದರೆ, ನ್ಯುಮೋನಿಯಾ, ಹೃದಯ ತೊಂದರೆಗಾಗಿ ಚಿಕಿತ್ಸೆಯಲ್ಲಿದ್ದು ಮೃತಪಟ್ಟರೆ, 66ರ ಹರೆಯದ ಮಹಿಳೆ ಸಹ ಉಸಿರಾಟ ತೊಂದರೆ, ಮಧುಮೇಹದ ಚಿಕಿತ್ಸೆಯಲ್ಲಿದ್ದು, ಪರೀಕ್ಷೆ ವೇಳೆ ಕೋವಿಡ್ ಪಾಸಿಟಿವ್ ಕಂಡುಬಂದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿ ದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 95ಕ್ಕೇರಿದೆ.

ಜಿಲ್ಲೆಯಲ್ಲಿ ತಗ್ಗಿದ ಪಾಸಿಟಿವ್ ವೇಗ ?

ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಪಾಸಿಟಿವ್ ಬರುವವರ ವೇಗ ತಗ್ಗಿರುವ ಲಕ್ಷಣ ಕಳೆದೊಂದು ವಾರದಿಂದ ಗೋಚರಿಸಿದೆ. ಆ.17ರಂದು 8000 ದಾಟಿದ ಪಾಸಿಟಿವ್ ಪ್ರಕರಣ ಆ.19ರಂದು 9000 ದಾಟುವ ಮೂಲಕ ಕೇವಲ ಎರಡೇ ದಿನದಲ್ಲಿ ಒಂದು ಸಾವಿರ ಸಂಖ್ಯೆ ದಾಟಿತ್ತು. ಮುಂದೆ ಅದು 10000 ದಾಟಿದ್ದು ಆ.22ರಂದು. ಅಂದರೆ ಇದಕ್ಕಾಗಿ ತಗಲಿದ್ದು ಮೂರು ದಿನಗಳು. ಇದೀಗ 10000ದಿಂದ 11 ಸಾವಿರ ದಾಟಲು ಬೇಕಾಗಿದ್ದು ಏಳು ದಿನಗಳು. ಹೀಗೆ ಜಿಲ್ಲೆಯಲ್ಲಿ 12ದಿನಗಳಲ್ಲಿ ಮೂರು ಸಾವಿರ ಪಾಸಿಟಿವ್ ಪತ್ತೆಯಾಗಿದ್ದು, ಪ್ರತಿದಿನ ಸರಾಸರಿ 250 ಪ್ರಕರಣ ಪತ್ತೆಯಾದಂತಾ ಗಿದೆ. ಈ ವಾರದಲ್ಲಿ ಮೂರು ದಿನ ಪಾಸಿಟಿವ್ ಸಂಖ್ಯೆ 100ರಿಂದ 200 ರೊಳಗಿದ್ದು, ಇನ್ನು ಮೂರು ದಿನ 250ರೊಳಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News