ದ.ಕ.ಜಿಲ್ಲೆಯಲ್ಲಿ 448 ಮಂದಿಗೆ ಕೋವಿಡ್ ಪಾಸಿಟಿವ್; 6 ಬಲಿ
ಮಂಗಳೂರು, ಆ. 28: ದ.ಕ.ಜಿಲ್ಲೆಯಲ್ಲಿ ಶುಕ್ರವಾರ 448 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 6ಮಂದಿ ಬಲಿಯಾಗಿದ್ದಾರೆ.
ಶುಕ್ರವಾರ ಪಾಸಿಟಿವ್‌ಗೊಳಗಾದ 448 ಮಂದಿಯಲ್ಲಿ ಮಂಗಳೂರಿನ 273, ಬಂಟ್ವಾಳದ 103, ಪುತ್ತೂರಿನ 27, ಸುಳ್ಯದ 17, ಬೆಳ್ತಂಗಡಿಯ 18 ಮತ್ತು ಇತರ ಜಿಲ್ಲೆಯ 10 ಮಂದಿ ಸೇರಿದ್ದಾರೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಒಟ್ಟು 11,837 ಮಂದಿಗೆ ಸೋಂಕು ತಗುಲಿದೆ.
ಹೊರ ಜಿಲ್ಲೆಯ 1 ಮತ್ತು ಮಂಗಳೂರು ತಾಲೂಕಿನ 3, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ತಲಾ 1 ಸಹಿತ ಜಿಲ್ಲೆಯಲ್ಲಿ ಶುಕ್ರವಾರ 6 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 343ಕ್ಕೇರಿದೆ.
ಈವರೆಗೆ ದ.ಕ.ಜಿಲ್ಲೆಯ 91,490 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 11,831 ಮಂದಿಯ ವರದಿ ಪಾಸಿಟಿವ್ ಮತ್ತು 79,653 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‌ನಿಂದ 11, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 170 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 112 ಮಂದಿಯ ಸಹಿತ ಶುಕ್ರವಾರ 293 ಮಂದಿ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 8973ಕ್ಕೇರಿದೆ. ಜಿಲ್ಲೆಯಲ್ಲಿ 2521 ಸಕ್ರಿಯ ಪ್ರಕರಣಗಳಿವೆ.