ಜಿಎಸ್‌ಟಿ ಕೊರತೆ ತುಂಬಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಪರ್ಯಾಯ ಆಯ್ಕೆಗಳು ಒಕ್ಕೂಟವಾದದ ವಂಚನೆ

Update: 2020-08-28 14:28 GMT

ಹೊಸದಿಲ್ಲಿ,ಆ.28: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಕೇಂದ್ರದ ನಿರಾಕರಣೆಯು ಭಾರತದ ಒಕ್ಕೂಟವಾದದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವಂಚನೆಯಾಗಿದೆ ಎಂದು ದಿಲ್ಲಿಯ ಹಣಕಾಸು ಸಚಿವ ಮನೀಷ್ ಸಿಸೋಡಿಯಾ ಅವರು ಹೇಳಿದ್ದಾರೆ. ಕೊರೋನ ವೈರಸ್ ಬಿಕ್ಕಟ್ಟಿನ ನಡುವೆ 21,000 ಕೋ.ರೂ.ಗಳ ಅಂದಾಜು ಆದಾಯ ಕೊರತೆಯಿಂದ ಕಷ್ಟದಲ್ಲಿರುವ ದಿಲ್ಲಿ ಸರಕಾರದ ಪರವಾಗಿ ಕೇಂದ್ರವು ಆರ್‌ಬಿಐನಿಂದ ಸಾಲವನ್ನು ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗುರುವಾರ ಐದು ಗಂಟೆಗಳ ಕಾಲ ನಡೆದಿದ್ದ 41ನೇ ಜಿಎಸ್‌ಟಿ ಮಂಡಳಿ ಸಭೆಯ ಅಂತ್ಯದಲ್ಲಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿಯಡಿ ಆದಾಯ ಕೊರತೆಯನ್ನು ತುಂಬಿಕೊಳ್ಳಲು ಎರಡು ಸಾಲದ ಆಯ್ಕೆಗಳನ್ನು ರಾಜ್ಯಗಳ ಮುಂದಿಟ್ಟಿದ್ದರು.

 ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ,ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ನೀಡಲು ಕೇಂದ್ರವು ನಿರಾಕರಿಸಿದೆ ಮತ್ತು ತಮ್ಮ ಕೊರತೆಯನ್ನು ಪೂರೈಸಿಕೊಳ್ಳಲು ಆರ್‌ಬಿಐನಿಂದ ಸಾಲ ಪಡೆದುಕೊಳ್ಳುವಂತೆ ಅವುಗಳಿಗೆ ಸೂಚಿಸಿದೆ. ಆದರೆ ಪ್ರಸಕ್ತ ಹೈಬ್ರಿಡ್ ಆಡಳಿತ ವ್ಯವಸ್ಥೆಯಡಿ ಆರ್‌ಬಿಐನಿಂದ ಸಾಲವನ್ನು ಪಡೆದುಕೊಳ್ಳಲು ದಿಲ್ಲಿ ಸರಕಾರಕ್ಕೆ ಸಾಧ್ಯವಿಲ್ಲ. ದಿಲ್ಲಿ ಸರಕಾರದ ಪರವಾಗಿ ಕೇಂದ್ರ ಸರಕಾರವೇ ಸಾಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News