×
Ad

ಇ-ಲೋಕ್ ಅದಾಲತ್‌ನಲ್ಲಿ ಉಡುಪಿ ಜಿಲ್ಲೆಯ 147 ಪ್ರಕರಣ ಇತ್ಯರ್ಥ

Update: 2020-08-28 21:40 IST

ಉಡುಪಿ, ಆ.28: ಕೋವಿಡ್ -19 ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಇ-ಲೋಕ್ ಅದಾಲತ್ ಮೂಲಕ ಉಡುಪಿ ಜಿಲ್ಲೆಯಲ್ಲಿ ಆ.25ರಿಂದ ಒಟ್ಟು 147 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಕಾವೇರಿ ತಿಳಿಸಿದ್ದಾರೆ.

ಮೇಘಾ ಇ-ಲೋಕ್ ಅದಾಲತ್ ಕುರಿತು ರಾಜ್ಯ ಹೈಕೋರ್ಟ್ ನ್ಯಾಯ ಮೂರ್ತಿ ಅರವಿಂದ ಕುಮಾರ್ ಅವರ ವಿಡಿಯೋ ಸಂವಾದದ ಮೂಲಕ ಇಂದು ನಡೆದ ಪತ್ರಿಕಾಗೋಷ್ಠಿಯ ಬಳಿಕ ಉಡುಪಿ ನ್ಯಾಯಾಲಯದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಸಿವಿಲ್ 13415 ಹಾಗೂ ಕ್ರಿಮಿನಲ್ 19030 ಸೇರಿ ದಂತೆ ಒಟ್ಟು 32,175 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಇದರಲ್ಲಿ ಇ- ಲೋಕ ಅದಾಲತ್‌ಗಳ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳ ಬಹುದಾದ ಸುಮಾರು 500 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದರು.

ಈಗಾಗಲೇ ಇ ಲೋಕ್‌ಅದಾಲತ್ ಮೂಲಕ ಇತ್ಯರ್ಥಪಡಿಸಿ ನ್ಯಾಯ ಒದಗಿಸಲಾದ 147 ಪ್ರಕರಣಗಳಲ್ಲಿ 79 ಮೋಟಾರು ವಾಹನ ನಷ್ಠ ಪರಿಹಾರ ದಾವೆಯಲ್ಲಿ 2,38,84000ರೂ. ನಷ್ಠ ಪರಿಹಾರ ನೀಡಲು ಆದೇಶ ನೀಡ ಲಾಗಿದೆ. 18 ಸಿವಿಲ್ ದಾವೆ, 18 ಇತರೆ ಕ್ರಿಮಿನಲ್ ಮೊಕದ್ದಮೆಗಳು, 28 ಚೆಕ್‌ಬೌನ್ಸ್ ಹಾಗೂ 4 ಕ್ರಿಮಿನಲ್ ಕೇಸ್‌ಗಳನ್ನು ರಾಜಿ ಮಾಡಾಗಿದೆ ಎಂದು ಅವರು ತಿಳಿಸಿದರು.

ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾದ ಪ್ರಕರಣಗಳನ್ನು ಕಕ್ಷಿದಾರರು ವಕೀಲರ ಮೂಲಕ ಅಥವಾ ನೇರವಾಗಿ ಇ-ಮೇಲ್ ಮೂಲಕ ರಾಜಿ ಸಂಧಾನಕ್ಕೆ ಪ್ರಸ್ತಾಪಿಸಬಹುದಾಗಿದೆ. ಉಭಯ ಕಕ್ಷಿದಾರರು ನ್ಯಾಯಾಧೀಶರ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಬಾರದೆಯೇ ಮೊಬೈಲ್ ಆ್ಯಪ್ ಮೂಲಕ ಕೇಸ್‌ಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News