×
Ad

ಹಸು, ಕರು ಸಾಗಾಟದ ವೇಳೆ ಹಲ್ಲೆ : ಮೂವರು ಆರೋಪಿಗಳ ವಿರುದ್ದ ಕೇಸು ದಾಖಲು

Update: 2020-08-28 22:47 IST

ಪುತ್ತೂರು: ಹೈನುಗಾರಿಕೆಯ ಉದ್ದೇಶಕ್ಕೆ ಹಸು ಮತ್ತು ಕರುವೊಂದನ್ನು ಖರೀದಿಸಿ ಮನೆಗೆ ಸಾಗಾಟ ನಡೆಸುತ್ತಿದ್ದ ಇಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ ಗುರುವಾರ ಪುತ್ತೂರು ತಾಲೂಕಿನ ಕೆಯ್ಯೂರು ಎಂಬಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆಯ್ಯೂರು ಗ್ರಾಮದ ಕಂಚಿನಪದವು ನಿವಾಸಿ ಮುಹಮ್ಮದ್ ಸಿರಾಜ್ ಮತ್ತು ಪಾತುಂಜ ಎಂಬಲ್ಲಿನ ನಿವಾಸಿ ಶಿಹಾಬುದ್ದೀನ್ ಹಲ್ಲೆಗೆ ಒಳಗಾದವರು. ಸ್ಥಳೀಯರಾದ ದಿನೇಶ್, ಅಜಿತ್ ಮತ್ತು ಭವಿನ್ ಹಲ್ಲೆ ನಡೆಸಿದ ಆರೋಪಿಗಳು ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ದೂರು ನೀಡಲಾಗಿದೆ. ಓಮ್ನಿ ಕಾರಿನಲ್ಲಿ ಬಂದ ಆರೋಪಿಗಳು ಜೀಪು ತಡೆದು ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News