×
Ad

ಸೆ.19ರಂದು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಇ-ಲೋಕ ಅದಾಲತ್

Update: 2020-08-28 22:56 IST

ಮಂಗಳೂರು, ಆ. 28: ರಾಜ್ಯಾದ್ಯಂತ ಸೆ.19 ರಂದು ಇ-ಅದಾಲತ್ ನಡೆಸಲಾಗುವುದು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ  ಕಾರ್ಯಾಧ್ಯಕ್ಷ ನ್ಯಾಯಾಧೀಶ ಅರವಿಂದ ಕುಮಾರ್ ವಿಡಿಯೋ ಕಾನ್ಫರೆನ್ಸ್ ನಲ್ಲಿಂದು ಜಿಲ್ಲಾಕೇಂದ್ರ ಗಳಿಗೆ ತಿಳಿಸಿದ್ದಾರೆ.

ಅವರು ಇಂದು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಢಿಯ ನ್ನುದ್ದೇಶಿಸಿ ಮಾತನಾಡುತ್ತಿದ್ದರು. 

ಈ ಮೆಗಾಅದಾಲತ್  ಮೂಲಕ ಮೋಟಾರ್ ವಾಹನ,ಚೆಕ್ ಅಮಾನ್ಯ ಪ್ರಕರಣ,ವಿಮಾ ಪ್ರಕರಣ,ಕೌಟುಂಬಿಕ ಸಮಸ್ಯೆ ಗಳ ಪ್ರಕರಣಗಳ ಬಗ್ಗೆ ಅದಾಲತ್ ನಡೆಯಲಿದೆ.ನ್ಯಾಯಾಲಯಕ್ಕೆ ಕಕ್ಷಿದಾರರು ನೇರವಾಗಿ ಹಾಜರಾಗದೆ ವಕೀಲರ ಮೂಲಕ ಅಥವಾ ಸ್ವತಃ ಮೊಬೈಲ್ ದೂರವಾಣಿ ಮೂಲಕ ಅದಾಲತ್ ನಲ್ಲಿ ಭಾಗವಹಿಸಬ ಹುದಾಗಿದೆ ಎಂದು ನ್ಯಾ. ಅರವಿಂದ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್  ನಲ್ಲಿ ಹೈ ಕೋರ್ಟ್ ನ್ಯಾಯಾಧೀಶರ ರಾದ  ನ್ಯಾ. ಅಲೋಕ್ ಅರಾದೆ, ನ್ಯಾ.ಅಭಯ ಶ್ರೀನಿವಾಸ್  ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ  ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಮುರಳೀಧರ ಪೈ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಶಿಲ್ಪಾ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News