ಕಾಪು : ಆಶಾ ಕಾರ್ಯಕರ್ತರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ
Update: 2020-08-28 23:08 IST
ಕಾಪು : ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಆಶಾ ಕಾರ್ಯಕರ್ತರಿಗೆ ಮತ್ತು ವೈದ್ಯರ ಬಳಗಕ್ಕೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಕೊರೋನ ಜನಜಾಗ್ರತಿಯ ಕರಪತ್ರಗಳನ್ನು ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಂಚಲಾಯಿತು.
ಈ ಸಂದರ್ಭದಲ್ಲಿ ಜಮಾಅತ್ ನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು, ಆಶಾ ಕಾರ್ಯಕರ್ತರ ಕಾರ್ಯವೈಖರಿಗೆ ಬೆಂಬಲಿಸುವ ಮಾತುಗಳನ್ನು ಹೇಳಿ ಹುರಿದುಂಬಿಸಿದರು.
ಕೊರೋನ ಭೀತಿಯ ಸಂದರ್ಭ ನಮ್ಮ ಸೇವೆಯನ್ನು ಗುರುತಿಸಿ, ನಮಗೆ ಪ್ರೋತ್ಸಾಹ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಗೆ ಪ್ರಭಾರ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಮತ ಅವರು ಶುಭ ಕೋರಿದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್, ಮುಹಮ್ಮದ್ ಅಲಿ ಇಬ್ರಾಹಿಮ್ , ಎಸ್‍ಐಒ ಕಾಪು ವರ್ತುಲದ ಅನೀಸ್ ಅಲಿ , ಸುಗಾಮಕಾರರು ಸುಭಾಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.