×
Ad

ಮುರ್ಡೇಶ್ವರ : ಸಮುದ್ರದಲ್ಲಿ ಇಬ್ಬರು ಪ್ರವಾಸಿಗರು ನೀರು ಪಾಲು

Update: 2020-08-30 22:55 IST

ಭಟ್ಕಳ : ಮುರ್ಡೇಶ್ವರಕ್ಕೆ ಬಂದಿದ್ದ ಎರಡು ಪ್ರತ್ಯೇಕ ಪ್ರವಾಸಿಗರ ತಂಡದಲ್ಲಿ ಇಬ್ಬರು ವ್ಯಕ್ತಿಗಳು ಸಮುದ್ರದಲ್ಲಿ ಮುಳುಗಿ ಸಾವನಪ್ಪಿದ ಘಟನೆ ರವಿವಾರ ನಡೆದಿದೆ. 

ಬೆಂಗಳೂರಿನಿಂದ  ಮುರುಡೇಶ್ವರ ಪ್ರವಾಸಕ್ಕೆ ಎಂದು ಬಂದಿದ್ದ 9 ಸ್ನೇಹಿತರ ತಂಡ  ಈಜಲು ಸಮುದ್ರದ ನೀರಿಗೆ ಇಳಿದು ಅದರಲ್ಲಿ ಅಭಿಜಿತ್ 29 ವರ್ಷ ಎನ್ನುವ ಯುವಕ ನೀರು ಪಾಲಾಗಿದ್ದಾನೆ. ಈತ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ.

ಕುಂದಾಪುರದ ಮದುವೆಗೆ ಎಂದು ಬಂದಿದ್ದ  ಶಿವಮೊಗ್ಗ ಸೊರಬದ 6 ಜನರು ಮದುವೆ ಮುಗಿಸಿ ಮುರ್ಡೇಶ್ವರಕ್ಕೆ  ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಲು ತೆರಳಿದಾಗ ಅಲೆಗಳ ಅಬ್ಬರಕ್ಕೆ ಸೊರಬ ಮೂಲದ ಯುವಕ ಶರತ್ (18) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News