2.5 ಕೋಟಿ ದಾಟಿದ ಕೊರೋನ ವೈರಸ್ ಸೋಂಕು: 8.42 ಲಕ್ಷ ಮಂದಿ ಸಾವು

Update: 2020-08-30 17:32 GMT

ಪ್ಯಾರಿಸ್ (ಫ್ರಾನ್ಸ್), ಆ. 30: ರವಿವಾರದ ವೇಳೆಗೆ, ಜಾಗತಿಕವಾಗಿ 2.5 ಕೋಟಿಗೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕನಿಷ್ಠ 2,50,29,250 ಮಂದಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವ ಕಾಯಿಲೆಯ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಆ ಪೈಕಿ, 8,42,915 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್‌ಪಿಸ ಸಂಗ್ರಹಿಸಿದ ಅಂಕಿಸಂಖ್ಯೆಗಳು ತಿಳಿಸಿವೆ.

ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ ಸುಮಾರು 40 ಶೇಕಡ ಅಮೆರಿಕ ಮತ್ತು ಬ್ರೆಝಿಲ್‌ಗಳಲ್ಲಿ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News