×
Ad

ಮಂಗಳೂರಿನಲ್ಲಿ ಅತಿಥಿ ಶಿಕ್ಷಕಕರಿಂದ ಧರಣಿ

Update: 2020-08-31 13:28 IST

ಮಂಗಳೂರು, ಆ.31: ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ, ಉದ್ಯೋಗ ಭದ್ರತೆ, ಇಎಸ್‌ಐ, ಪಿಎಫ್ ಸೌಲಭ್ಯಕ್ಕೆ ಆಗ್ರಹಿಸಿ, ಗುರುತಿನ ಚೀಟಿ ಮತ್ತು ಸೇವಾ ಪ್ರಮಾಣ ಪತ್ರ ಒದಗಿಸುವಂತೆ, ವೇತನ ಹೆಚ್ಚಿಸಿ 12 ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಅತಿಥಿ ಶಿಕ್ಷಕರ ರಾಜ್ಯವ್ಯಾಪಿ ಧರಣಿಯ ಅಂಗವಾಗಿ ಮಂಗಳೂರು ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸಿದರು.

 ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಮತ್ತು ಅತಿಥಿ ಶಿಕ್ಷಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವು ಅತಿಥಿ ಶಿಕ್ಷಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News