×
Ad

ಶ್ರೀಕೃಷ್ಣ ಮಠದಿಂದ ಒಂದು ಕೋಟಿ ರೂ. ಬ್ಯಾಂಕ್ ಸಾಲ: ಪರ್ಯಾಯ ಅದಮಾರು ಶ್ರೀ

Update: 2020-08-31 20:00 IST

ಉಡುಪಿ, ಆ.31: ಆರ್ಥಿಕ ಸಂಕಷ್ಟದಿಂದ ಶ್ರೀಕೃಷ್ಣ ಮಠದ ಆಡಳಿತ ನಿರ್ವ ಹಣೆಗಾಗಿ ಬ್ಯಾಂಕಿನಿಂದ ಒಂದು ಕೋಟಿ ರೂ. ಸಾಲ ಪಡೆಯಲಾಗಿದೆ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 15ಲಕ್ಷ ರೂ. ಈಗಾಗಲೇ ಪಡೆದು ಕೊಂಡಿದ್ದೇವೆ. ಮುಂದೆ ಅಗತ್ಯಕ್ಕೆ ತಕ್ಕಂತೆ ತೆಗೆದುಕೊಳ್ಳಲಾಗುವುದು. ಸಾಲವನ್ನು ಆಸ್ತಿ ಅಡವಿಟ್ಟೇ ಪಡೆದುಕೊಂಡಿದ್ದೇವೆ. ಮಠದ ನಿರ್ವಹಣೆ, ಎಣ್ಣೆ, ತುಪ್ಪ ಸೇರಿದಂತೆ ಪ್ರತಿದಿನ ಸುಮಾರು 1.25ಲಕ್ಷ ರೂ. ಖುರ್ಚು ಇರುತ್ತದೆ ಎಂದರು.

ಅದಮಾರು ಮಠದ ಅಧೀನದಲ್ಲಿರುವ ವಿದ್ಯಾಸಂಸ್ಥೆಗಳಿಂದ ಹಣವನ್ನು ಪಡೆಯಬಹುದಲ್ಲವೇ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ನಾವು ಈವರೆಗೆ ಮಠದಿಂದ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಹಣ ನೀಡಿದ್ದೇವೆ ಹೊರತು ಶಿಕ್ಷಣ ಸಂಸ್ಥೆಯ ಹಣವನ್ನು ಮಠಕ್ಕೆ ಬಳಕೆ ಮಾಡಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಆಯಾ ಟ್ರಸ್ಟ್, ಮಂಡಳಿಗಳಿರುವುದರಿಂದ ಅಲ್ಲಿಂದ ಮಠಕ್ಕೆ ಹಣ ಪಡೆಯಲು ಆಗಲ್ಲ ಎಂದು ಅವರು ಹೇಳಿದರು.

ಮಠದಲ್ಲಿ ಸಂಪತ್ತು ಇದ್ದರೂ ಸಾಲ ಮಾಡುವುದರಿಂದ ಮಠದ ಸಿಬ್ಬಂದಿ ಗಳಿಗೆ ಕೆಲವೊಂದು ಜವಾಬ್ದಾರಿ ಹಾಗೂ ಎಚ್ಚರಿಕೆ ಬರುತ್ತದೆ. ಮಠದಲ್ಲಿರುವ ಮೂಲ ನಿಧಿಯನ್ನು ಕೂಡ ನಾವು ತೆಗೆಯುವುದಿಲ್ಲ. ಸಾಲದ ವಿಚಾರ ತಿಳಿದು 10-15 ಮಂದಿ ನೆರವು ನೀಡಲು ಮುಂದೆ ಬಂದಿ ದ್ದಾರೆ. 1988-90ರಲ್ಲಿ ಶ್ರೀವಿಭುದೇಶ ತೀರ್ಥರು ಕೂಡ 60ಲಕ್ಷ ರೂ. ಸಾಲ ಮಾಡಿದ್ದರು. ಅದರಲ್ಲಿ 25ಲಕ್ಷ ರೂ.ವನ್ನು ಅವರು ತಮ್ಮ ಪರ್ಯಾಯ ಅವಧಿ ಮುಗಿದ ನಂತರ ತೀರಿಸಿದ್ದರು ಎಂದು ಅವರು ತಿಳಿಸಿದರು.

‘ಸರಕಾರವನ್ನು ಕೇಳುವುದು ಸರಿಯಲ್ಲ’

ಈ ಹಿಂದೆ ಸರಕಾರದಿಂದ ಸಾಕಷ್ಟು ಕೇಳಿದ್ದೇವೆ. ಆದರೆ ಈಗ ನಾವು ಸರಕಾರ ವನ್ನು ಕೇಳುವುದು ಸರಿಯಲ್ಲ. ದೇಶ ತುಂಬಾ ವಿಶಾಲವಾಗಿದೆ. ಸ್ವಾವಲಂಬಿ ಭಾರತೀಯರಾಗಿ ಕಡುಬಡವರಾದರೂ ಸರಕಾರವನ್ನು ಕೇಳಬಾರದು ಎಂದು ಪರ್ಯಾಯ ಅದಮಾರು ಶ್ರೀ ಹೇಳಿದರು.

ಜನರು ಅಕ್ಕಿ ಕೊಡುವುದು ಸರಕಾರದ ಜವಾಬ್ದಾರಿ ಎಂದು ತಿಳಿದುಕೊಳ್ಳ ಬಾರದು. ನಮಗೆ ನಮ್ಮದೇ ಆದ ಕರ್ತವ್ಯಗಳಿರುತ್ತದೆ. ಸರಕಾರ ಎಷ್ಟು ಜನರಿಗೆ ಎಷ್ಟು ದಿನ ಅಂತ ಕೊಡಬಹುದು. ಹಾಗೆ ಕೊಟ್ಟರೆ ಮುಂದೆ ಅದು ಸಾಲದ ರೂಪದಲ್ಲಿ ನಮ್ಮ ತಲೆಯ ಮೇಲೆಯೇ ಇರುತ್ತದೆ. ಆದುದರಿಂದ ಜನರು ಸರಕಾರ ಸಹಾಯ ಮಾಡಬೇಕೆಂದು ಬಯಸಬಾರದು ಎಂದು ಅವರು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News