‘ಸ್ಕಿಲ್ ಕನೆಕ್ಟ್' ಉದ್ಯೋಗ ತರಬೇತಿಗೆ ಆಹ್ವಾನ
Update: 2020-08-31 20:06 IST
ಉಡುಪಿ, ಆ.31: ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ವತಿಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು -www.kaushalkar.com -ಎಂಬ ಜಾಲತಾಣದಲ್ಲಿ ಸ್ಕಿಲ್ ಕನೆಕ್ಟ್(ಕೌಶಲ್ಯ ಸಂಪರ್ಕ) ಎಂಬ ವೆಬ್‌ಪೋರ್ಟಲ್ ನ್ನು ಆರಂಭಿಸಿದ್ದು, ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ವಿವಿಧ ಉದ್ದಿಮೆ/ಕೈಗಾರಿಕೆ/ಉದ್ಯೋಗದಾತರ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ತರಬೇತಿಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ನೀಡಿ ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿ, ಮೊದಲನೆ ಮಹಡಿ, ’ಬಿ’ ಬ್ಲಾಕ್, ನಂ 201 ರಜತಾದ್ರಿ, ಮಣಿಪಾಲ ಅಥವಾ ದೂರವಾಣಿ ಸಂಖ್ಯೆ:0820-2574869ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.