ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ
Update: 2020-08-31 20:53 IST
ಕುಂದಾಪುರ, ಆ.31: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಹೆಮ್ಮಾಡಿ ಜಂಕ್ಷನ್ ಬಳಿ ಆ.30ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ವಾಹನದ ಚಾಲಕ, ತೀರ್ಥಹಳ್ಳಿಯ ಮಂಜುನಾಥ(32) ಮತ್ತು ಶಿವಮೊಗ್ಗ ನಿವಾಸಿ ಯೋಗೀಶ್(26) ಬಂಧಿತ ಆರೋಪಿಗಳು. ಇವರಿಂದ 16ಸಾವಿರ ರೂ. ಮೌಲ್ಯದ ಮೂರು ದನ ಹಾಗೂ ಒಂದು ಕರು, 4ಲಕ್ಷ ರೂ. ವೌಲ್ಯದ ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.