ಕೈಲಾಸ ಮಾನಸಸರೋವರದ ಬಳಿ ಕ್ಷಿಪಣಿ ಉಡಾವಣೆ ನೆಲೆ ಸ್ಥಾಪಿಸಿದ ಚೀನಾ: ವರದಿ

Update: 2020-08-31 15:29 GMT

ಹೊಸದಿಲ್ಲಿ, ಆ.31: ಪೂರ್ವ ಲಡಾಖ್‌ನ ಗಡಿಯಲ್ಲಿ ಭಾರತ-ಚೀನಾ ನಡುವಿನ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಕೈಲಾಸ ಮಾನಸಸರೋವರದ ಬಳಿ ಚೀನಾವು ಭೂಮಿಯಿಂದ ಆಗಸಕ್ಕೆ ಉಡಾಯಿಸುವ ಕ್ಷಿಪಣಿ ನೆಲೆಯನ್ನು ಸ್ಥಾಪಿಸಿದೆ ಎಂದು ಅಮೆರಿಕದ ‘ದಿ ಎಪೋ ಟೈಮ್ಸ್’ ವರದಿ ಮಾಡಿದೆ.

ಭಾರತದ ವಿರುದ್ಧ ಚೀನಾ ನಡೆಸುತ್ತಿರುವ ಪ್ರಚೋದನಕಾರಿ ಕ್ರಿಯೆಯ ಮುಂದುವರಿದ ಭಾಗ ಇದಾಗಿದೆ. ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗಿನ ಗಡಿಭಾಗದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ನಡೆಸುತ್ತಿರುವ ಅತಿಕ್ರಮಣ ಮತ್ತು ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತಿರುವ ಭಾರತವನ್ನು ಪ್ರಚೋದಿಸಲು ಚೀನಾ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಸಾಹಿತಿ, ಲಂಡನ್ ಮೂಲದ ಚಿಂತಕರ ಚಾವಡಿ ‘ಬ್ರಿಡ್ಜ್ ಇಂಡಿಯಾ’ದ ಭೌಗೋಳಿಕ ರಾಜಕೀಯ ವಿಶ್ಲೇಷಕ ಪ್ರಿಯಾಜಿತ್ ದೇಬ್‌ಸರ್ಕಾರ್ ಪ್ರತಿಕ್ರಿಯಿಸಿರುವುದಾಗಿ ‘ದಿ ಎಪೋ ಟೈಮ್ಸ್’ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News