ಅಡ್ಡೂರು ರಿಕ್ಷಾ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಶಿಲಾನ್ಯಾಸ

Update: 2020-08-31 15:39 GMT

ಅಡ್ಡೂರು, ಆ.31: ಇಲ್ಲಿನ ಜಂಕ್ಷನ್‌ನಲ್ಲಿರುವ ರಿಕ್ಷಾ ನಿಲ್ದಾಣಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸೋಮವಾರ ಇಂಟರ್‌ಲಾಕ್ ಅಳವಡಿಕೆ ಕಾಮಗರಿಗೆ ಶಿಲಾನ್ಯಾಸಗೈದರು.

ಬಳಿಕ ಮಾತನಾಡಿದ ಅವರು ತಾನು ಎಂಎಲ್‌ಸಿಯಾಗಿರುವಾಗ ಶಾಸಕ ನಿಧಿಯಿಂದ ತೆಗೆದಿರಿಸಲಾಗಿದ್ದ 2 ಲಕ್ಷ ರೂ. ಅನುದಾನ ದಲ್ಲಿ ರಿಕ್ಷಾ ಸ್ಟೇಂಡ್‌ಗೆ ಇಂಟರ್‌ಲಾಕ್ ಕಾಮಗಾರಿ ನಡೆಯಲಿದೆ. ಊರಿನ ರಾಯಭಾರಿಗಳಂತಿರುವ ರಿಕ್ಷಾ ಚಾಲಕರಿಗೆ ಸಮಾಜದಲ್ಲಿ ಉತ್ತಮ ಗೌರವ ಸಿಗಬೇಕು. ವಿಧಾನ ಪರಿಷತ್ತಿನಲ್ಲೂ ರಿಕ್ಷಾ-ಕಾರು ಚಾಲಕ ಮಾಲಕರ ಧ್ವನಿಯಾಗಿದ್ದ ತಾನು, ಕೋವಿಡ್ ಸಂದರ್ಭದಲ್ಲಿ ದುಡಿಯುವ ವರ್ಗದ ರಿಕ್ಷಾ ಚಾಲಕರಿಗೆ ಸರಕಾರದ ನೆರವು ಕೋರಿದ್ದೇನೆ ಎಂದರು.

ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಸ್ವಾಗತಿಸಿದರು. ತಾಪಂ ಸದಸ್ಯ ಸಚಿನ್ ಅಡಪ, ಕೆಪಿಸಿಸಿ ಸದಸ್ಯ ಪೃಥ್ವೀರಾಜ್ ಕೆ, ಅಡ್ಡೂರು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಜಲೀಲ್, ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿಎಂ ಉದಯ ಭಟ್, ಮಾಜಿ ಸದಸ್ಯರಾದ ಎಕೆ ಮುಹಮ್ಮದ್, ಅಹ್ಮದ್ ಬಾವ, ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಬಾವ, ಉಪಾಧ್ಯಕ್ಷ ಝೈನುದ್ದೀನ್ ಹಾಗೂ ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News