ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಬಹರೈನ್ ವತಿಯಿಂದ ಕಿಟ್ ವಿತರಣೆ

Update: 2020-08-31 15:44 GMT

ಮಂಗಳೂರು, ಆ.31: ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಬಹರೈನ್ ಇದರ ಆಶ್ರಯದಲ್ಲಿ ಕೋವಿಡ್-19 ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮವು ನಗರದ ವೆಲೆನ್ಸಿಯಾದಲ್ಲಿರುವ ಕೋಟೆ ಮ್ಯಾನ್ಷನ್‌ನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಎನ್‌ಆರ್‌ಐ ಫೋರಂ ಬಹರೈನ್ ಅಧ್ಯಕ್ಷ ಲೀಲಾಧರ ಬೈಕಂಪಾಡಿ ಮಾತನಾಡಿ ಕಳೆದ 28ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವ ಈ ಸಂಸ್ಥೆಯು ಸದಾ ಸಮಾಜದ, ದೀನ ದಲಿತರ ಬಗ್ಗೆ ಸ್ಪಂದಿಸುವ ಕೆಲಸ ಸದಾ ಮಾಡುತ್ತಿದೆ ಎಂದರು.

ಮಾಜಿ ಮೇಯರ್ ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್, ಮಾಜಿ ಉಪಮೇಯರ್ ಸಲೀಂ,ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ಉಮ್ಮರ್, ಸ್ಥಾಪಕ ಸದಸ್ಯ ಮೊಹಿದ್ದೀನ್, ಕಾರ್ಯಕ್ರಮ ಸಂಯೋಜಕ ಮುಬಾರಕ್ ಅತಿಥಿಗಳಾಗಿದ್ದರು.

ಮೊಹಿಸಿನ್ ಬಾವ ಸ್ವಾಗತಿಸಿದರು. ಸೈಯದ್ ಬಹರೈನ್ ವಂದಿಸಿದರು. ಸಾಹಿತಿ ಡಾ.ಕಾಸರಗೋಡು ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News