×
Ad

ಕೋವಿಡ್ ಪರೀಕ್ಷೆಗೆ ದರ ನಿಗದಿ

Update: 2020-08-31 21:15 IST

ಮಂಗಳೂರು, ಆ.31: ಸರಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ಸರಕಾರಿ ಆಸ್ಪತ್ರೆಗಳು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಮಾದರಿಯನ್ನು ಕಳುಹಿಸಿದರೆ ಅದರ ಮೊತ್ತ 1,500 ರೂ. ನಿಗದಿಯಾಗಿರುತ್ತದೆ. ಇದರಲ್ಲಿ ಸ್ಕ್ರೀನಿಂಗ್, ದೃಢೀಕರಣ ಪರೀಕ್ಷೆ ಜೊತಗೆ ಪಿಪಿಇ ಕಿಟ್ ಮೊತ್ತವು ಒಳಗೊಂಡಿರುತ್ತದೆ.

ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಮೊತ್ತ 2,500 ರೂ. ನಿಗದಿಯಾಗಿರುತ್ತದೆ. ಈ ಮೊತ್ತದಲ್ಲಿ  ಪಿಪಿಇ ಕಿಟ್ ದರವೂ ಒಳಗೊಂಡಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News