×
Ad

ಕೆಎಸ್ಸಾರ್ಟಿಸಿ ಉಚಿತ ಬಸ್ ಪಾಸ್ : ಸೇವಾಸಿಂಧು ಮೂಲಕ ಅರ್ಜಿ ಕಡ್ಡಾಯ

Update: 2020-08-31 21:17 IST

ಮಂಗಳೂರು, ಆ.31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 2020-21ನೇ ಸಾಲಿನ ಸಕಾಲ ಸಂಬಂಧಿತ ಸೇವೆಗಳಾದ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್, ವಿಕಲಚೇತನರ ರಿಯಾಯಿತಿ ಬಸ್ ಪಾಸ್, ಅಂಧರ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಬಸ್ ಪಾಸ್, ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್ ಹಾಗೂ ಅಪಘಾತ ಪರಿಹಾರ ನಿಧಿ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಫಲಾನುಭವಿಗಳ ಬಸ್ ಪಾಸ್ ನವೀಕರಿಸಿಕೊಳ್ಳಲು ಅಥವಾ ಹೊಸ ಪಾಸುಗಳನ್ನು ಪಡೆದುಕೊಳ್ಳಲು ಸೇವಾಸಿಂಧು ಪೋರ್ಟಲ್‌ ನಲ್ಲಿ ಅರ್ಜಿ ಸಲ್ಲಿಸವುದು ಕಡ್ಡಾಯವಾಗಿದೆ. ಅರ್ಜಿಯಲ್ಲಿ ಆಧಾರ್, ಮೊಬೈಲ್ ನಂಬರ್ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಆಪ್‌ಲೋಡ್ ಮಾಡಬೇಕು. ಬಸ್ ಪಾಸ್ ಪಡೆಯುವ ಸಂದರ್ಭ ಮೂಲ ದಾಖಲೆಯ ಜೆರಾಕ್ಸ್ ಪ್ರತಿ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಕೆಎಸ್ಸಾರ್ಟಿಸಿ ಪುತ್ತೂರು ಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News