ಇಸ್ರೇಲ್-ಯುಎಇ ನಡುವೆ ನೇರ ವಾಣಿಜ್ಯ ವಿಮಾನ ಆರಂಭ

Update: 2020-08-31 17:58 GMT

ಟೆಲ್ ಅವೀವ್ (ಇಸ್ರೇಲ್), ಆ. 31: ಇಸ್ರೇಲ್‌ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಮೊದಲ ನೇರ ವಾಣಿಜ್ಯ ವಿಮಾನವು ಸೋಮವಾರ ಟೆಲ್ ಅವೀವ್ ಸಮೀಪದ ಬೆನ್ ಗುರಿಯನ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ಎಲ್ ಅಲ್’ಗೆ ಸೇರಿದ ವಿಮಾನ 971 ಅಮೆರಿಕ-ಇಸ್ರೇಲ್ ಜಂಟಿ ನಿಯೋಗವೊಂದನ್ನು ಹೊತ್ತು ಯುಎಇಗೆ ಹಾರಿದೆ. ವಿಮಾನದಲ್ಲಿರುವ ಅಮೆರಿಕ ನಿಯೋಗದ ನೇತೃತ್ವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಳಿಯ ಹಾಗೂ ಶ್ವೇತಭವನದ ಸಲಹೆಗಾರ ಜ್ಯಾರೆಡ್ ಕಶ್ನರ್ ವಹಿಸಿದ್ದಾರೆ.

ವಿಮಾನವು ಸೋಮವಾರ ಮಧ್ಯಾಹ್ನ ಅಬುಧಾಬಿಯಲ್ಲಿ ಇಳಿದಿದೆ.

ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ಮರಳಿಸುವ ಒಪ್ಪಂದಕ್ಕೆ ಉಭಯ ದೇಶಗಳು ಇತ್ತೀಚೆಗೆ ಸಹಿ ಹಾಕಿದ ಹಿನ್ನೆಲೆಯಲ್ಲಿ, ಈ ಬೆಳವಣಿಗೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News