ರಶ್ಯ, ಚೀನಾಗಳ ಲಸಿಕೆಗಳಲ್ಲಿ ದೋಷ: ಪರಿಣತರು

Update: 2020-08-31 18:01 GMT

ಟೊರಾಂಟೊ/ಶಿಕಾಗೊ, ಆ. 31: ರಶ್ಯ ಮತ್ತು ಚೀನಾಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್-19 ಲಸಿಕೆಗಳು ಸಂಭಾವ್ಯ ನ್ಯೂನತೆಗಳನ್ನು ಹೊಂದಿವೆ. ತುಂಬಾ ಮಂದಿಯಲ್ಲಿ ಕಾಣಿಸಿಕೊಂಡಿರುವ ಸಾಮಾನ್ಯ ನೆಗಡಿ ವೈರಸನ್ನು ಆಧರಿಸಿ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ಹಾಗಾಗಿ ಅವುಗಳ ಪರಿಣಾಮ ಸೀಮಿತವಾಗಿರುವ ಸಾಧ್ಯತೆಯಿದೆ ಎಂದು ಕೆಲವು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದಲ್ಲಿ ಸೇನಾ ಬಳಕೆಗಾಗಿ ಅಂಗೀಕರಿಸಲಾಗಿರುವ ಕ್ಯಾನ್‌ಸಿನೊ ಬಯಾಲಜಿಕ್ಸ್ ಲಸಿಕೆಯು ಅಡಿನೊವೈರಸ್ ಟೈಪ್ 5 ಅಥವಾ ‘ಎಡಿ5’ರ ಸುಧಾರಿತ ರೂಪವಾಗಿದೆ. ಬೃಹತ್ ಪ್ರಮಾಣದ ಪರೀಕ್ಷೆಗಳನ್ನು ಪೂರ್ಣಗೊಳಿಸುವ ಮೊದಲೇ, ಹಲವಾರು ದೇಶಗಳಿಂದ ತುರ್ತು ಅನುಮೋದನೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಕಂಪೆನಿಯು ಮಾತುಕತೆಯಲ್ಲಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಕಳೆದ ವಾರ ವರದಿ ಮಾಡಿದೆ.

ಈ ತಿಂಗಳ ಆದಿ ಭಾಗದಲ್ಲಿ ರಶ್ಯದಲ್ಲಿ ಅಂಗೀಕಾರ ಪಡೆದಿರುವ ಹಾಗೂ ಮಾಸ್ಕೋದ ಗಮಲೇಯ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಲಸಿಕೆಯೂ ವ್ಯಾಪಕ ಪರೀಕ್ಷೆಗೆ ಒಳಪಟ್ಟಿಲ್ಲ ಹಾಗೂ ಅದನ್ನೂ ‘ಎಡಿ5’ ಲಸಿಕೆಯನ್ನು ಆಧರಿಸಿಯೇ ಅಭಿವೃದ್ಧಿಪಡಿಸಲಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದಲ್ಲಿ ಲಸಿಕೆ ಸಂಶೋಧಕಿಯಾಗಿರುವ ಆನಾ ಡರ್ಬಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News