×
Ad

ಎಸ್ಸೆಸ್ಸೆಫ್ ಕ್ಯಾಂಪಸ್ ಉಪ್ಪಿನಂಗಡಿ ಡಿವಿಷನ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Update: 2020-08-31 23:48 IST

ಉಪ್ಪಿನಂಗಡಿ, ಆ31: ಎಸ್ಸೆಸ್ಸೆಫ್ ಕ್ಯಾಂಪಸ್ ಉಪ್ಪಿನಂಗಡಿ ಡಿವಿಷನ್ ಇದರ ವತಿಯಿಂದ ಇಲ್ಲಿನ ಹೋಟೆಲ್ ರಾಯಲ್ ಮ್ಯಾಕ್ಸಿಕೋ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸಾಧಕರಿಗೆ ಸನ್ಮಾನ ಹಾಗೂ ಎಜುಕೇಶನಲ್ ಕೇರಿಯರ್ ಗೈಡೆನ್ಸ್ ಶಿಬಿರ ನಡೆಯಿತು.

ಮುಖ್ಯ ತರೇಬೇತುದಾರರಾಗಿ ಮಾತನಾಡಿದ ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಆತೂರು, 'ವಿದ್ಯಾರ್ಥಿಗಳು ಕೋರ್ಸ್ ಗಳನ್ನು ಆಯ್ಕೆ ಮಾಡುವಲ್ಲಿ ಎಡವುತ್ತಾರೆ. ಆದ್ದರಿಂದ ಅವರಿಷ್ಟದ ಕೋರ್ಸ್ ಗಳನ್ನು ಆಯ್ಕೆ ಮಾಡಲು ಪೋಷಕರು ಸಹಕರಿಸಬೇಕು. ಸಾಧಿಸಲು ಕುಟುಂಬದ ಹಿನ್ನಲೆ ಕಾರಣವೇ ಅಲ್ಲ. ಸಾಧನೆಯ ಮೈಲುಗಲ್ಲನ್ನು ಸಾಧಿಸಿದವರೆಲ್ಲರೂ ಬಡ ಕುಟುಂಬದಿಂದಲೇ ಬಂದವರು. ನಾನೂ ಕೂಡಾ ಕಡು ಬಡತನದಿಂದ ಬೆಳೆದವ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಡಿ.ಎನ್ ಹೀರಯ್ಯ ಅವರು, 'ನಾನೂ ಕೂಡಾ ಲಾಸ್ಟ್ ಬೇಂಚ್ ವಿದ್ಯಾರ್ಥಿ. ನಮ್ಮ ಬೇಂಚ್ ಮೇಟ್ಸ್ ಆಗಿದ್ದವರೆಲ್ಲರೂ ಇಂದು ಸಾಧನೆಯ ಗುರಿ ತಲುಪಿದ್ದಾರೆ. ಏಕಾಗ್ರತೆಯಿದ್ದರೆ ಯಶಸ್ಸು ಖಂಡಿತ ಎಂದು ಅಭಿಪ್ರಾಯಪಟ್ಟರು. ಈ ರೀತಿಯ ಶೈಕ್ಷಣಿಕ ಸಾಧನೆಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುತ್ತಿರುವ ಕ್ಯಾಂಪಸ್ ಎಸ್ಸೆಸ್ಸೆಫ್ ಇದರ ಕಾರ್ಯಾಚರಣೆ ಶ್ಲಾಘನೀಯ' ಎಂದರು.

ಕಾರ್ಯಕರ್ಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕದೊಂದಿಗೆ ರಾಜ್ಯಕ್ಕೆ ತೃತೀಯನಾಗಿ ಹೊರಹೊಮ್ಮಿದ ಕೌಶಿಕ್ ರಾವ್, 607 ಅಂಕಗಳಿಸಿದ ಹಿಬಾ ಫಾತಿಮಾ, ಪಿಯುಸಿಯಲ್ಲಿ 584 ಅಂಕಗಳಿಸಿದ ಮುಫೀದಾ ಬಾನು ಸಹಿತ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯ ಸುಮಾರು ನೂರರಷ್ಟು ಸಾಧಕರನ್ನು ಸನ್ಮಾನಿಸಲಾಯಿತು.

ಶೀ ಕ್ಯಾಂಪಸ್ ಪ್ರಾಧ್ಯಾಪಕ ಎಕೆ ನಂದಾವರ ಅವರು ಪತ್ರಿಕೋದ್ಯಮದ ಅವಶ್ಯಕತೆಯ ಬಗೆಗಿನ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಅಲೀ ತುರ್ಕಳಿಕೆ, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಯು.ಪಿ ಮುಸ್ತಫಾ, ಬದ್ರಿಯಾ ಸ್ಕೂಲ್ ಆತೂರು ಚೇರ್ ಮ್ಯಾನ್ ಪುತ್ತುಂಞಿ ಸರ್, ಹಕೀಂ ಕಳಂಜಿಬೈಲು ಸೇರಿ ಅನೇಕರು ಭಾಗವಹಿಸಿದ್ದರು. 

ಕಾರ್ಯಕ್ರಮವನ್ನು ಲತೀಫ್ ಮಾಸ್ಟರ್ ಉದ್ಘಾಟಿಸಿದರು. ಕ್ಯಾಂಪಸ್ ಎಸ್ಸೆಸ್ಸೆಫ್ ಕಾರ್ಯದರ್ಶಿ ಜುನೈದ್ ತುರ್ಕಳಿಕ್ಕೆ ಸ್ವಾಗತಿಸಿದರು. ಎಂ.ಎಂ ಮಹ್ ರೂಫ್ ಆತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News