×
Ad

ಖ್ಯಾತ ವೈದ್ಯ ಡಾ. ಎನ್. ಎ. ಖಾನ್ ನಿಧನ

Update: 2020-09-02 18:54 IST

ದಾಂಡೇಲಿ,ಸೆ.2: ಖ್ಯಾತ ವೈದ್ಯರಾದ ಡಾ. ಎನ್. ಎ. ಖಾನ್ ಅವರು ಇಂದು ನಿಧನರಾದರು. ಅವರಿಗೆ 94ನೇ ವಯಸ್ಸಾಗಿತ್ತು. ವೈದ್ಯ ಖಾನ್ ಅವರು ತಮ್ಮ ವೈದ್ಯಕೀಯ ಸೇವೆಯಿಂದ ಜನಪ್ರಿಯರಾಗಿದ್ದರು. ದಾಂಡೇಲಿಯ ಲಯನ್ಸ್ ಕ್ಲಬ್ ನ ಸ್ಥಾಪಕ ಸದಸ್ಯರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ, ದಾಂಡೇಲಿ ಕಾರ್ಖಾನೆಯ ಮುಖ್ಯ ವೈದ್ಯಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಬಡವರು, ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. 

ಶಾಸಕ ಆರ್. ವಿ. ದೇಶಪಾಂಡೆ ಸಂತಾಪ:

ದಾಂಡೇಲಿಯ ಖ್ಯಾತ ವೈದ್ಯ ಡಾ. ಎನ್ .ಎ. ಖಾನ್ ಅವರ ನಿಧನಕ್ಕೆ ಮಾಜಿ ಸಚಿವ, ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಇಂದು ಸಂತಾಪ ಸೂಚಿಸಿದ್ದಾರೆ. 

ಡಾ. ಖಾನ್ ಅವರ ನಿಧನ ವಿಷಯ ತಿಳಿದು ತುಂಬಾ ದುಃಖವಾಯಿತು. ತುಂಬ ಶಾಂತ, ವಿನಮ್ರ ಸ್ವಭಾವದವರಾಗಿದ್ದರು. 2011ರಲ್ಲಿ ಖ್ಯಾತ ಸಾಹಿತಿ ಯು.ಆರ್. ಅನಂತಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ವಿ. ಆರ್. ದೇಶಪಾಂಡೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಇಂತಹ ವಿಶಿಷ್ಟ  ವ್ಯಕ್ತಿತ್ವದ ವ್ಯಕ್ತಿ ಇಂದು ಕಣ್ಮರೆಯಾಗಿದ್ದು ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಇವರ ಕುಟುಂಬದವರಿಗೆ ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಆಶಿಸುತ್ತೇನೆ. ದಾಂಡೇಲಿಯ ಲಯನ್ಸ್ ಕ್ಲಬ್‍ನ ಸ್ಥಾಪಕ ಸದಸ್ಯರಾಗಿ, ಉತ್ತರಕನ್ನಡ ಜಿಲ್ಲೆಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ, ದಾಂಡೇಲಿ ಕಾಗದ ಕಾರ್ಖಾನೆಯ ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಇವರ ಸೇವೆಗೆ ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳು ಒಲಿದು ಬಂದಿದೆ. ಸೇವೆಯಲ್ಲಿ ಜೀವನದ ಪರಿಪೂರ್ಣತೆಯನ್ನುಕಂಡು ಹಿಂದುಳಿದ ವರ್ಗಗಳ, ಬಡವರ, ದೀನದಲಿತರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆಂದು ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News