×
Ad

​ಸೆ.3: ಆದಿತ್ಯರಾವ್‌ನ ಮಂಪರು ಪರೀಕ್ಷೆ

Update: 2020-09-02 20:43 IST

ಮಂಗಳೂರು, ಸೆ.2: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ (36)ನ ಮಂಪರು ಪರೀಕ್ಷೆಯು ಗುರುವಾರ ನಡೆಯಲಿದೆ.

ಜೈಲು ಸಿಬ್ಬಂದಿ ಮತ್ತು ಬಜ್ಪೆ ಪೊಲೀಸರು ಬುಧವಾರವೇ ಬೆಂಗಳೂರಿಗೆ ತೆರಳಿದ್ದು, ಗುರುವಾರ ಪೂ.11 ಗಂಟೆಯಿಂದ ಮಂಪರು ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಮಡಿವಾಳದ ಫೋರೆನ್ಸಿಕ್ ಸೈನ್ಸ್ ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆಯಲಿದೆ. ಪ್ರಕರಣದ ತನಿಖೆಯ ಭಾಗವಾಗಿ ಆದಿತ್ಯರಾವ್‌ನ ಮಂಪರು ಪರೀಕ್ಷೆಗೆ ಪೊಲೀಸರು ಈ ಹಿಂದೆ ನ್ಯಾಯಾಲಯವನ್ನು ಕೋರಿದ್ದು, ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ಪರೀಕ್ಷೆ ನಡೆಯಲಿದೆ.

ಆದಿತ್ಯ ರಾವ್ ವಿರುದ್ಧ ಜೂ.11ರಂದು ಮಂಗಳೂರು ನಗರ ಪೊಲೀಸರು 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಎಫ್‌ಎಸ್‌ಎಲ್ ವರದಿಯ ಪ್ರಕಾರ ವಿಮಾನ ನಿಲ್ದಾಣದಲ್ಲಿ ಇರಿಸಿದ್ದು ನೈಜ ಬಾಂಬ್ ಇತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News