×
Ad

‘ಇ-ಸಂಜೀವಿನಿ’ ರಾ.ಟೆಲಿ ಸಮಾಲೋಚನಾ ಸೇವೆ ಆರಂಭ

Update: 2020-09-02 20:58 IST

ಉಡುಪಿ, ಸೆ.2: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಕೇಂದ್ರ/ಆಸ್ಪತ್ರೆಗಳಿಗೆ ಭೇಟಿ ನೀಡುವುದು ಕಷ್ಟ ಸಾದ್ಯವಾಗಿರುತ್ತದೆ. ಈ ದಿಶೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕಾಗಿ ‘ಇ-ಸಂಜೀವಿನಿ’ ಟೆಲಿ ಮೆಡಿಸಿನ್ ರಾಷ್ಟ್ರ ಮಟ್ಟದಲ್ಲಿ ಆರಂಭಗೊಂಡಿದೆ. ಇ-ಸಂಜೀವಿನಿ ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್‌ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ ಮೊಬೈಲ್ ಆ್ಯಪ್‌ನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಮನೆಯಿಂದಲೇ ವೈದ್ಯರನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ.

ಕಾರ್ಯಾಚರಣೆ: ಟೆಲಿ ಸಮಾಲೋಚನಾ ಆರೋಗ್ಯ ಸೇವೆ ಪಡೆಯಲು ಇ-ಸಂಜೀವಿನಿ ಮೊಬೈಲ್ ಆ್ಯಪ್‌ನ್ನು ಗೂಗಲ್ ಪ್ಲೇಸ್ಟೋರ್ ಅಥವಾ ಕಂಪ್ಯೂಟರ್ ಗೂಗಲ್‌ನಲ್ಲಿ ಇ-ಸಂಜೀವಿನಿ ಓಪಿಡಿ ಎಂದು ನಮೂದಿಸಬೇಕು. ಪರದೆ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದು ಕೊಳ್ಳುತ್ತದೆ. ಇದರಲ್ಲಿ ರೋಗಿಯ ದಾಖಲಾತಿ ಕಾಲಂನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿದರೆ ನಿಮಗೆ ಓಟಿಪಿ ಸಂಖ್ಯೆ ಲಭ್ಯವಾಗುವುದು. ಇದರ ಮೂಲಕ ದಾಖಲಾತಿ ಅರ್ಜಿ ತೆರೆದುಕೊಳ್ಳುವುದು. ಇದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದಿಸಬೇಕು. ಆಗ ಟೋಕನ್ ನಂಬರ್ ಲಭ್ಯವಾಗುವುದು. ಈ ನಂಬರ್ ನೀಡಿ ತಜ್ಞ ವೈದ್ಯರನ್ನು ವಿಡಿಯೋಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯು ಸೋಮವಾರದಿಂದ ಶನಿವಾರದವರೆಗೆ, ಬೆಳಗ್ಗೆ 10 ರಿಂದ ಸಂಜೆ 4:30ರವರೆಗೆ ಲಭ್ಯವಿರುತ್ತದೆ. ವಿಡಿಯೋಕಾಲ್ ಮುಖಾಂತರ ವೈದ್ಯರು ರೋಗಿಯ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಚಿಕಿತ್ಸೆಯನ್ನು ಸೂಚಿಸು ವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News