×
Ad

​ಆರೋಗ್ಯ ಇಲಾಖೆಯಲ್ಲಿ ವೈದ್ಯರ ನೇಮಕಾತಿ

Update: 2020-09-02 21:51 IST

ಮಂಗಳೂರು, ಸೆ.2: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಅಧೀನದಲ್ಲಿ ಬರುವ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳಿಗೆ ಎಂಬಿಬಿಎಸ್ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಸೆ.5ರಂದು ಪೂ.11ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಹುದ್ದೆಯ ವಿವರ: ಎಂಬಿಬಿಎಸ್ ವೈದ್ಯರು 5 ಹುದ್ದೆಗಳು, ವಿದ್ಯಾರ್ಹತೆ - ಎಂಬಿಬಿಎಸ್. ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ ಹೌಸ್‌ಮೆನ್‌ಶಿಪ್ ಆಗಿರಬೇಕು. ಹುದ್ದೆಗಳ ವರ್ಗೀಕರಣ- ಸಾಮಾನ್ಯ ಅರ್ಹತೆ - 2 ಪ್ರವರ್ಗ 2 ಬಿ- 1, ಪ್ರವರ್ಗ- 11 (ಎ)- 1, ಪ..ಜಾತಿ-1, ಮಾಸಿಕ ವೇತನ - 60,000 ರೂ.

ವಯೋಮಿತಿ: 2020ನೇ ಸೆ.5ರಂದು ಸಾ.ವರ್ಗ- 35 ವರ್ಷ, ಇತರ ಹಿಂದುಳಿದ ವರ್ಗಗಳಿಗೆ 38 ವರ್ಷ, ಪ.ಜಾ./ಪ.ಪಂ ಅಭ್ಯರ್ಥಿಗಳು 40 ವರ್ಷ ಮೀರಿರಬಾರದು. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಕಚೇರಿಯಿಂದ ಗಳೂರು ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0824-2423672ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News