×
Ad

ಕೊರಿಯ ಪರ್ಯಾಯ ದ್ವೀಪದತ್ತ ಧಾವಿಸುತ್ತಿರುವ ಪ್ರಬಲ ಚಂಡಮಾರುತ

Update: 2020-09-02 23:33 IST

ದಕ್ಷಿಣ ಕೊರಿಯದ ಬೂಸಾನ್ (ದಕ್ಷಿಣ ಕೊರಿಯ), ಸೆ. 2: ಪ್ರಬಲ ಚಂಡಮಾರುತವೆಂದು ಹೇಳಲಾಗಿರುವ ‘ಮೇಸಕ್’ ಕೊರಿಯ ಪರ್ಯಾಯ ದ್ವೀಪದತ್ತ ಧಾವಿಸುತ್ತಿದ್ದು ದಕ್ಷಿಣ ಕೊರಿಯದಲ್ಲಿ ಬುಧವಾರ 300ಕ್ಕೂ ಅಧಿಕ ದೇಶಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಹಾಗೂ ದಕ್ಷಿಣ ಮತ್ತು ಉತ್ತರ ಕೊರಿಯಗಳು ಚಂಡಮಾರುತ ಎಚ್ಚರಿಕೆಯನ್ನು ಹೊರಡಿಸಿವೆ.

ರಿಸಾರ್ಟ್ ದ್ವೀಪ ಜೇಜುವಿನ ದಕ್ಷಿಣದ ದಿಕ್ಕಿನಲ್ಲಿ ಚಂಡಮಾರುತವು ಗಂಟೆಗೆ 162 ಕಿ.ಮೀ. ವೇಗದೊಂದಿಗೆ ಧಾವಿಸುತ್ತಿದೆ.

ಈ ಚಂಡಮಾರುತವು 2003ರ ಮೇಮಿ ಚಂಡಮಾರುತದಷ್ಟೇ ಶಕ್ತಿಶಾಲಿಯಾಗಿದೆ ಎಂದು ದಕ್ಷಿಣ ಕೊರಿಯದ ಪ್ರಧಾನಿ ಚುಂಗ್ ಸೈ-ಕ್ಯುನ್ ಹೇಳಿದ್ದಾರೆ. ಅಂದಿನ ಚಂಡಮಾರುತದ ಪಕ್ರೋಪಕ್ಕೆ 131 ಮಂದಿ ಬಲಿಯಾಗಿದ್ದರು ಹಾಗೂ 3 ಬಿಲಿಯ ಡಾಲರ್‌ಗಿಂತಲೂ ಹೆಚ್ಚಿನ ವೌಲ್ಯದ ಹಾನಿ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News