ಇಬ್ಬರು ಭಾರತೀಯರನ್ನು ಉಗ್ರರೆಂದು ಘೋಷಿಸುವ ಪಾಕಿಸ್ತಾನದ ಯತ್ನವನ್ನು ತಡೆದ ವಿಶ್ವಸಂಸ್ಥೆ: ಭಾರತದ ಪ್ರತಿನಿಧಿ

Update: 2020-09-03 09:20 GMT

ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಉಗ್ರವಾದ ನಿಗ್ರಹ ಕುರಿತಾದ ನಿರ್ಬಂಧಗಳನ್ನು ಬಳಸಿ ಇಬ್ಬರು ಭಾರತೀಯರನ್ನು ಉಗ್ರರೆಂದು ಘೋಷಿಸುವ ಪಾಕಿಸ್ತಾನದ ಯತ್ನವನ್ನು ಮಂಡಳಿಯು ವಿಫಲಗೊಳಿಸಿದೆ ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ  ಟಿ ಎಸ್ ತಿರುಪತಿ ತಿಳಿಸಿದ್ದಾರೆ.

ಅಂಗಾರ ಅಪ್ಪಾಜಿ ಹಾಗೂ ಗೋಬಿಂದ ಪಟ್ನಾಯಕ್ ಎಂಬ ಇಬ್ಬರನ್ನು ಈ  ನಿಬಂಧನೆಯಡಿಯಲ್ಲಿ ಉಗ್ರರೆಂದು ಘೋಷಿಸಲು ಪಾಕಿಸ್ತಾನ ಮುಂದಡಿಯಿಟ್ಟಿದ್ದರೂ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ನೇತೃತ್ವದ ಭದ್ರತಾ ಮಂಡಳಿ ಈ ಯತ್ನವನ್ನು ತಡೆಯಿತು. ಪಾಕಿಸ್ತಾನ ಆ ಇಬ್ಬರು ವ್ಯಕ್ತಿಗಳು ಉಗ್ರರೆಂಬುದಕ್ಕೆ ಪುರಾವೆಗಳನ್ನು ಒದಗಿಸಲು ಕೂಡ ವಿಫಲವಾಗಿತ್ತು.

ಈ ಮೂಲಕ ಉಗ್ರವಾದದ ವಿರುದ್ಧದ ಪ್ರಕ್ರಿಯೆವೊಂದಕ್ಕೆ ಪಾಕಿಸ್ತಾನ ಧಾರ್ಮಿಕ ಬಣ್ಣ ನೀಡುವುದನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ತಡೆದಿದೆ ಎಂದು ತಿರುಪತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News