×
Ad

ಪರ್ಕಳದಲ್ಲಿ ಕಂಡುಬಂದ ಬೃಹದಾಕಾರದ ಪಾತರಗಿತ್ತಿ!

Update: 2020-09-03 19:33 IST

ಮಣಿಪಾಲ, ಸೆ.3: ಸುಮಾರು 25 ಸೆ.ಮಿ. ಅಗಲ ಹಾಗೂ 15ಸೆಮಿ. ಉದ್ದದ ಬೃಹದಾಕಾರದ ಪಾತರಗಿತ್ತಿ (ಚಿಟ್ಟೆ) ಪರ್ಕಳದ ಶೆಟ್ಟಿಬೆಟ್ಟು ಗುರುವಾರ ಕಂಡುಬಂದಿದೆ.

ಪರ್ಕಳದ ಶೆಟ್ಟಿಬೆಟ್ಟು ವಾರ್ಡಿನ ಮಾರುತಿನಗರದ ಅಕ್ಕು ಎಂಬವರ ಮನೆಯಲ್ಲಿ ಬೃಹದಾಕಾರದ ಆಕರ್ಷಕ ವಿನ್ಯಾಸದ ಪಾತರಗಿತ್ತಿಯೊಂದು ತೆಂಗಿನ ಮರದಲ್ಲಿ ಕುಳಿತಿರುವುದನ್ನು ಸ್ಥಳೀಯ ನಿವಾಸಿ ಗಣೇಶ್ ಕುಮಾರ್ ಎಂಬವರು ಗಮನಿಸಿದರು.

ಈ ಚಿಟ್ಟೆಯನ್ನು ಕಾಗೆಗಳು ಸುತ್ತುವರಿದಿರುವುದನ್ನು ಗಮನಿಸಿದ ಗಣೇಶ್, ಅದನ್ನು ಸುರಕ್ಷಿತವಾಗಿ ಕಾಗೆಗಳ ದಾಳಿಯಿಂದ ರಕ್ಷಿಸಿ ಅದಕ್ಕೆ ತೆಂಗಿನ ಗರಿಗಳ (ಮಡಲು) ಹೊದಿಕೆಯನ್ನು ನೀಡಿದ್ದಾರೆ. ಈ ಚಿಟ್ಟೆ ಮೊಟ್ಟೆ ಇಡುವ ಸ್ಥಿತಿಯಲ್ಲಿ ಇರುವಂತೆ ಕಂಡುಬರುತ್ತಿದೆ ಎಂದು ಮಾಹಿತಿ ನೀಡಿದ ಗಣೇಶ್ ಕುಮಾರ್ ತಿಳಿಸಿದ್ದಾರೆ.

ಚಿತ್ರ-ಮಾಹಿತಿ: ಗಣೇಶ್‌ರಾಜ್ ಸರಳೇಬೆಟ್ಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News