×
Ad

ಉಡುಪಿ: 18 ಮಂದಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Update: 2020-09-03 21:05 IST

ಉಡುಪಿ, ಸೆ.3: ಐವರು ಪ್ರೌಢ ಶಾಲಾ ಹಾಗೂ 13 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 18 ಮಂದಿ ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ ಪ್ರಸ್ತುತ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರೌಢ ಶಾಲಾ ವಿಭಾಗ: ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕ ಬಿ.ಮೋಹನ ದಾಸ್ ಶೆಟ್ಟಿ, ಕಾರ್ಕಳ ರೆಂಜಾಳದ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ವಿನಾಯಕ ನಾಯ್ಕ, ಉಡುಪಿ ರಾಜೀವ ನಗರದ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಸಂಜೀವ ಎಚ್ ನಾಯಕ್, ಅಂಪಾರು ಸಂಜಯಗಾಂಧಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಉದಯ್ ಕುಮಾರ್ ಬಿ. ಹಾಗೂ ಕೋಟ ವಿವೇಕ ಪ.ಪೂ. ಕಾಲೇಜಿನ ಸಹ ಶಿಕ್ಷಕ ಪ್ರೇಮಾನಂದ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ:  ಬ್ರಹ್ಮಾವರ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೇಸು, ಕಾರ್ಕಳ ಎಲಿಯಾಳ ಸರಕಾರಿ ಶಾಲೆಯ ಸಹಶಿಕ್ಷಕ ಸತೀಶ್ ರಾವ್ ಕೆ., ಕುಂದಾಪುರ ಕೊರವಡಿ ಸರಕಾರಿ ಶಾಲೆಯ ಸಹ ಶಿಕ್ಷಕಿ ವಿಶಾಲಾಕ್ಷಿ, ಉಡುಪಿ ಪಡುಅಲೆವೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ, ಬೈಂದೂರು ಕೆರಾಡಿ ಸರಕಾರಿ ಶಾಲೆಯ ಸಹ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ, ಹೆಬ್ರಿ ಮುದ್ರಾಡಿ ಸರಕಾರಿ ಶಾಲೆಯ ಸಹ ಶಿಕ್ಷಕ ಶ್ರೀನಿವಾಸ ಭಂಡಾರಿ.

ಬೈಂದೂರು ಸೆಳ್ಕೋಡು ಸರಕಾರಿ ಶಾಲೆಯ ಸಹ ಶಿಕ್ಷಕ ಭಾಸ್ಕರ್ ನಾಯ್ಕ, ಕಲ್ಯಾಣಪುರ ಸರಕಾರಿ ಶಾಲೆಯ ಸಹ ಶಿಕ್ಷಕ ಅರವಿಂದ ಹೆಬ್ಬಾರ್, ಹೆಜಮಾಡಿ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುನೀತಾ ಶೆಟ್ಟಿ, ಬೈಂದೂರು ಸೂರ್ಕುಂದ ಸರಕಾರಿ ಶಾಲೆಯ ಸಹ ಶಿಕ್ಷಕ ಪ್ರಾನ್ಸಿಸ್ ವಿ.ಟಿ, ಕುಂದಾಪುರ ಪಡುವಾಲ್ತೂರು ಸರಕಾರಿ ಶಾಲೆಯ ಸಹ ಶಿಕ್ಷಕ ಎಚ್.ಪ್ರಭಾಕರ್ ಶೆಟ್ಟಿ, ಕಾರ್ಕಳ ನಲ್ಲೂರು ಪರಪ್ಪಾಡಿ ಸರಕಾರಿ ಶಾಲೆಯ ಸಹ ಶಿಕ್ಷಕಿ ಪೂರ್ಣಿಮಾ ಶೆಣೈ, ಬೈಂದೂರು ಯಳೂರುತೊಪ್ಲು ಸರಕಾರಿ ಶಾಲೆಯ ಸಹ ಶಿಕ್ಷಕ ಶಶಿಧರ ಶೆಟ್ಟಿ ಈ ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News