‘ಒಕ್ಯುಪೈ ವಾಲ್ ಸ್ಟ್ರೀಟ್’ನ ಡೇವಿಡ್ ಗ್ರೇಬರ್ ನಿಧನ

Update: 2020-09-03 16:38 GMT

ವೆನಿಸ್, ಸೆ. 3: ‘ಒಕ್ಯುಪೈ ವಾಲ್ ಸ್ಟ್ರೀಟ್’ ಚಳವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಆ್ಯಂತ್ರೊಪಾಲಜಿಸ್ಟ್ ಡೇವಿಡ್ ಗ್ರೇಬರ್ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಗ್ರೇಬರ್ ನಿಧನದ ಸುದ್ದಿಯನ್ನು ಅವರ ಪತ್ನಿ ನಿಕಾ ಡಬ್ರೊವ್‌ಸ್ಕಿ ಸೆಪ್ಟಂಬರ್ 3ರಂದು ಖಚಿತಪಡಿಸಿದ್ದಾರೆ.

ಗ್ರೇಬರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಆ್ಯಂತ್ರೊಪಾಲಜಿ ಪ್ರೊಫೆಸರ್ ಆಗಿದ್ದರು.

 ಅವರು ‘ಒಕ್ಯುಪೈ ವಾಲ್ ಸ್ಟ್ರೀಟ್’ ಚಳವಳಿಯಲ್ಲಿ ತೊಡಗಿಕೊಂಡಿರುವಂತೆಯೇ, ‘ಗ್ಲೋಬಲ್ ಜಸ್ಟಿಸ್ ಚಳವಳಿ’ಯಲ್ಲೂ ಸಕ್ರಿಯರಾಗಿದ್ದರು.

ಆರ್ಥಿಕ ಅಸಮಾನತೆಯನ್ನು ಪ್ರತಿಭಟಿಸಿ ಅವರ ನೇತೃತ್ವದಲ್ಲಿ 2011ರ ಸೆಪ್ಟಂಬರ್‌ನಲ್ಲಿ ‘ಒಕ್ಯುಪೈ ವಾಲ್‌ಸ್ಟ್ರೀಟ್’ ಚಳವಳಿ ಆರಂಭವಾಯಿತು. ಚಳವಳಿಯು ನ್ಯೂಯಾರ್ಕ್‌ನ ಆರ್ಥಿಕ ಜಿಲ್ಲೆ ವಾಲ್ ಸ್ಟ್ರೀಟ್‌ನಲ್ಲಿ ಆರಂಭವಾಯಿತು ಹಾಗೂ ಬಳಿಕ ಅಮೆರಿಕದಾದ್ಯಂತ ಹಾಗೂ ವಿದೇಶಗಳಿಗೂ ಹರಡಿತು. ಆ ಸಂದರ್ಭದಲ್ಲಿ ‘‘ನಾವು (ಬಡವರು) 99 ಶೇಕಡದಷ್ಟಿದ್ದೇವೆ’’ ಎಂಬ ಅವರ ಹೇಳಿಕೆ ಭಾರೀ ಜನಪ್ರಿಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News