×
Ad

ಕಾಜೂರು ದರ್ಗಾ ಶರೀಫ್‌ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಚಾಲನೆ

Update: 2020-09-03 22:13 IST

ಬೆಳ್ತಂಗಡಿ: ಸರ್ವಧರ್ಮೀಯರ ಸೌಹಾರ್ದ ಕ್ಷೇತ್ರವಾದ ಕಾಜೂರು ದರ್ಗಾಶರೀಫ್‌ನಲ್ಲಿ ನಾಡಿನ ಭಕ್ತರಿಗೆ ಪ್ರಾರ್ಥನೆಗೆ ಸರಕಾರದ ಕೋವಿಡ್ ನಿಯಮಾವಳಿ ಪಾಲಿಸಿ ಅವಕಾಶ ಕಲ್ಪಿಸಲಾಗಿದೆ ಎಂದು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ತಿಳಿಸಿದ್ದಾರೆ.

ಜಗತ್ತಿನಿಂದಲೇ ಕೋವಿಡ್ ಮುಕ್ತಿಹೊಂದಲಿ ಎಂಬುದಾಗಿ ಆ. 30 ರಂದು ಕಾಜೂರು ದರ್ಗಾಶರೀಫ್ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಸರ್ವಧರ್ಮೀಯರಿಗೆ ಪ್ರಾರ್ಥನೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ಪ್ರಕಟಿಸಿದರು.

ಕಾಜೂರು ಕ್ಷೇತ್ರದ ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್ ಮಾರ್ಗದರ್ಶನದಂತೆ ಕೇಂದ್ರ ಸರಕಾರದ ಅನ್‌ಲಾಕ್- 4 ನಿಯಮಾವಳಿಯಂತೆ ಮುಂದಿನ ಸೆ. 21 ರ ನಂತರ ಕಾಜೂರಿನಲ್ಲಿ  ಸ್ವಲಾತ್ ಮಜ್ಲಿಸ್, ಖುತುಬಿಯತ್, ಸಾಮೂಹಿಕ ದರ್ಗಾ ಪ್ರಾರ್ಥನೆ ಇತ್ಯಾಧಿಗಳೂ ಆರಂಭಗೊಳ್ಳಲಿದೆ  ಎಂದರು.

ಆ.‌30 ರಂದು ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ಕಾಜೂರಿನ ಉಭಯ ದರ್ಗಾಶರೀಫ್‌ಗಳಲ್ಲಿ ವಿಶ್ವಶಾಂತಿಗಾಗಿ ಮತ್ತು ಕೋವಿಡ್ ಮುಕ್ತಿಗಾಗಿ ಪ್ರಾರ್ಥನೆ, ಕೊರೊನಾದಿಂದ ಮೃತಪಟ್ಟವರಿಗಾಗಿ ವಿಶೇಷ ದುಆ ಸಲ್ಲಿಸಲಾಯಿತು.

ಈ ಸಂದರ್ಭ ಧರ್ಮಗುರುಗಳಾದ ಹಮೀದ್ ಫೈಝಿ ಕಿಲ್ಲೂರು, ಆಡಳಿತ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರ. ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಸದಸ್ಯರಾದ ಸಿದ್ದೀಕ್ ಕೆ.ಹೆಚ್,ಎನ್.ಎಮ್ ಯಾಕೂಬ್ ಮತ್ತು ಉಮರ್‌ಕುಂಞಿ, ಮಾಜಿ ಅಧ್ಯಕ್ಷ ಕೆ.ಎಮ್ ಉಮರ್ ಸಖಾಫಿ, ಮಲವಂತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಯು ಮುಹಮ್ಮದ್, ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News