ಬೈರೂತ್ ಸ್ಫೋಟ ಸಂಭವಿಸಿ ತಿಂಗಳ ನಂತರ ಅವಶೇಷಗಳೆಡೆಯಲ್ಲಿ ಜೀವದ ಸುಳಿವು

Update: 2020-09-04 08:31 GMT

ಬೈರೂತ್: ಆಗಸ್ಟ್ 4ರಂದು ನಗರದಲ್ಲಿ ವ್ಯಾಪಕ ಸಾವು ನೋವಿಗೆ ಕಾರಣವಾದ ಭಾರೀ ಸ್ಫೋಟದ ಸಂದರ್ಭ ಕುಸಿದ ಕಟ್ಟಡವೊಂದರ ಅವಶೇಷಗಳಡಿಯಲ್ಲಿ ಯಾರೋ ಜೀವಂತವಿರುವ ಸುಳಿವು ರಕ್ಷಣಾ ಕಾರ್ಯಕರ್ತರಿಗೆ ದೊರಕಿದೆ.

ನಗರದ ಗೆಮ್ಮಯ್ಝೆ ಪ್ರದೇಶದ ಕಟ್ಟಡದ ಅವಶೇಷಗಳೆಡೆಯಲ್ಲಿ ಶ್ವಾನದೊಂದಿಗೆ ಆಗಮಿಸಿದ ರಕ್ಷಣಾ ಕಾರ್ಯಕರ್ತರಿಗೆ ಈ ಸುಳಿವು ದೊರಕಿದೆ. ಸುಮಾರು 190 ಜನರನ್ನು ಬಲಿ ಪಡೆದು 6,000ಕ್ಕೂ ಅಧಿಕ ಜನರು ಗಾಯಗೊಂಡ ಈ ಸ್ಫೋಟದಿಂದ ತೀವ್ರವಾಗಿ ಬಾಧಿತವಾದ ಪ್ರದೇಶಗಳಲ್ಲಿ ಗೆಮ್ಮಯ್ಝೆ ಒಂದಾಗಿದೆ.

 ಯಾರಾದರೂ ಇನ್ನೂ ಬದುಕುಳಿದಿರಬಹುದೆಂಬ ಆಶಾವಾದದಿಂದ ಅವಶೇಷಗಳೆಡೆಯಲ್ಲಿ ಸಾಕಷ್ಟು ಶೋಧ ಕಾಯಾಚರಣೆ ಮುಂದುವರಿದರೂ ಅದು ಅಪಾಯಕಾರಿಯಾಗಬಹುದು ಎಂದು ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಈ ಕಾರ್ಯಾಚರಣೆಗೆ ಇನ್ನೂ ಘನ ಸಲಕರಣೆ ಬೇಕಾಗಿದ್ದು ಕಟ್ಟಡ ಮತ್ತಷ್ಟು ಅಪಾಯವೊಡ್ಡುವ ಸಾಧ್ಯತೆಯಿದೆ.

ಆದರೆ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ತಿಳಿಯುತ್ತಲೇ ಜನರು ಗುಂಪು ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಈ ಕಟ್ಟಡದ ತಳ ಅಂತಸ್ತಿನಲ್ಲಿ ಈ ಹಿಂದೆ ಬಾರ್ ಕಾರ್ಯಾಚರಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News