ಗಡಿ ಉದ್ವಿಗ್ನತೆ: ದಕ್ಷಿಣ ಪ್ಯಾಂಗೋಂಗ್ ಸಮೀಪ ಯುದ್ಧ ಟ್ಯಾಂಕ್ ಗಳನ್ನು ನಿಯೋಜಿಸಿದ ಚೀನಾ

Update: 2020-09-04 10:43 GMT

ಹೊಸದಿಲ್ಲಿ: ಪೂರ್ವ ಲಡಾಖ್‍ ನ ಸಮೀಪದ ದಕ್ಷಿಣ ಪಂಗ್ಯೊಂಗ್ ಪ್ರಾಂತ್ಯದಲ್ಲಿ ಚೀನಾದ ಯುದ್ಧ ಟ್ಯಾಂಕ್‍ಗಳು ಹಾಗೂ ಸೇನಾ ಪಡೆಗಳು ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡಿವೆ ಎಂದು NDTV ವರದಿ ಮಾಡಿದೆ.

ಆಗಸ್ಟ್ 30ರಂದು ಚೀನಾ ಅತಿಕ್ರಮಣ ಯತ್ನವನ್ನು ಹಿಮ್ಮೆಟ್ಟಿಸಿ ಈ ಪ್ರದೇಶದ ಕೆಲವೊಂದು ಪ್ರಮುಖ ಸ್ಥಳಗಳ ಮೇಲೆ ಭಾರತ ನಿಯಂತ್ರಣ ಸಾಧಿಸಿದ ನಂತರದ ಬೆಳವಣಿಗೆ ಇದಾಗಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಗಿಂತ ಸುಮಾರು 20 ಕಿಮೀ ದೂರದಲ್ಲಿ ಚೀನಾದ ಟ್ಯಾಂಕ್ ‍ಗಳಿರಬಹುದೆಂದು ಅಂದಾಜಿಸಲಾಗಿದೆ.

ಈ ಪ್ರಾಂತ್ಯದಲ್ಲಿ ಇದೀಗ ಭಾರತದ ಸ್ಥಿತಿ ಸುದೃಢವಾಗಿದೆಯಾದರೂ ಚೀನಾದ ಸೇನೆ ಬ್ಲ್ಯಾಕ್ ಟಾಪ್ ಮತ್ತು ಹೆಲ್ಮೆಟ್ ಪ್ರದೇಶಗಳಲ್ಲಿ ಇನ್ನೂ ಪ್ರಾಬಲ್ಯ ಹೊಂದಿದೆ.

ಚೀನಾದ ಯುದ್ಧ ವಿಮಾನಗಳ ಹಾರಾಟವೂ ಹೆಚ್ಚಾಗಿದ್ದು, ನ್ಗರಿ-ಗುನ್ಸ ಮತ್ತು ಹೋಟನ್ ವಾಯು ನೆಲೆಗಳಿಂದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿವೆ. ಭಾರತ ಕೂಡ  ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ತನ್ನ ಯುದ್ಧ ವಿಮಾನಗಳ ಹಾರಾಟ ನಡೆಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News