×
Ad

ಪಿಪಿಸಿ: ಶ್ರೀಕೃಷ್ಣನ ಕುರಿತ ಉಪನ್ಯಾಸದ ನೇರಪ್ರಸಾರ

Update: 2020-09-04 18:10 IST

ಉಡುಪಿ, ಸೆ.4: ಇಲ್ಲಿನ ಪೂರ್ಣಪ್ರಜ್ಞ ಪದವಿ ಕಾಲೇಜಿನ ಕನ್ನಡ ವಿಭಾಗವು ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ಶ್ರೀಕೃಷ್ಣಾಷ್ಟಮಿಯ ಅಂಗವಾಗಿ ಸೆ.8ರ ಮಂಗಳವಾರ ಅಪರಾಹ್ಣ 2:30ಕ್ಕೆ ಶ್ರೀಕೃಷ್ಣನ ಕುರಿತ ಉಪನ್ಯಾಸದ ನೇರಪ್ರಸಾರವನ್ನು ಆಯೋಜಿಸಿದೆ.

ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀಪಾತ್ರಧಾರಿ ಶಶಿಕಾಂತ ಶೆಟ್ಟಿ ಅವರು ‘ಯಕ್ಷಗಾನ ಕವಿಗಳು ಕಂಡಂತೆ ಶ್ರೀಕೃಷ್ಣ’ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದು, ಉಡುಪಿ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚಿಸ ಲಿದ್ದಾರೆ. ಕಾಲೇಜಿನ ಯೂ ಟ್ಯೂಬ್ ಚಾನಲ್‌ನಲ್ಲಿ ಉಪನ್ಯಾಸದ ನೇರ ಪ್ರಸಾರ ನಡೆಯಲಿದ್ದು, ಆಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News