×
Ad

ಬಂಟ್ವಾಳ: ಪೆಟ್ರೋಲ್‌ ಬಂಕ್‌ ಶಟರ್ ಮುರಿದು ಕಳವು

Update: 2020-09-04 22:27 IST

ಬಂಟ್ವಾಳ, ಸೆ.4: ತಾಲೂಕಿನ ಪಿಲಾತಬೆಟ್ಟು ಗ್ರಾಮದ, ದೈಕಿನಕಟ್ಟೆ ಎಂಬಲ್ಲಿರುವ ಭಾರತ್‌ ಪೆಟ್ರೋಲಿಯಂ ಕಂಪೆನಿಯ ಪೆಟ್ರೋಲ್‌ ಬಂಕ್‌ನ ಶಟರ್ ಮುರಿದು ನಗದು ಕಳವು ಮಾಡಿದ ಬಗ್ಗೆ ದೂರಲಾಗಿದೆ. 

ಶುಕ್ರವಾರ ಬೆಳಗ್ಗಿನ ಜಾವ 5.30 ರ ವೇಳೆಗೆ ಪೆಟ್ರೋಲ್ ಬಂಕ್ ನ ನೌಕರ ಕೆಲಸಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣ ಬಂಕ್ ನ ಮೆನೇಜರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಗದು 1,21,344 ರೂ.  ದೋಚಿ ಪರಾರಿಯಾಗಿದ್ದಾರೆ ಎಂದು ಬಂಕ್ ನ ಮೆನೇಜರ್  ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್.ಐ.ಸೌಮ್ಯ  ಮತ್ತವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News