‘ಮೆಟಲ್ ಮ್ಯಾನ್ ಆಫ್ ಇಂಡಿಯಾ’ ಅಂ.ರಾ.ಖ್ಯಾತಿ ಕಲಾವಿದ ದಿವಾಕರ ಶೆಟ್ಟಿ ನಿಧನ

Update: 2020-09-05 08:33 GMT

ಮುಂಬೈ : ಮೂಲತ: ಉಡುಪಿ ಮೂಡನಿಡಂಬೂರಿನವರಾದ ಮುಂಬೈ ನಿವಾಸಿ ಅಂತಾರಾಷ್ಟ್ರೀಯ ಖ್ಯಾತಿ ಚಿತ್ರಕಲಾವಿದ ದಿವಾಕರ ರಾಮ ಶೆಟ್ಟಿ (63) ಅಲ್ಪಕಾಲದ ಅಸೌಖ್ಯದಿಂದ ಮಹಾನಗರದ ಚಾರ್ಕೋಪ್‌ನ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗ ಅಭಿಮಾನಿಗಳನ್ನು ಆಗಲಿದ್ದಾರೆ.

ಮರದ ಉಬ್ಬುಶಿಲ್ಪಗಳ ವಿಶಿಷ್ಟ ಕಲಾರಚನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದ ಶೆಟ್ಟಿ, ತಮ್ಮ ಗಣೇಶ ಸರಣಿ, ಸೂರ್ಯ ಸರಣಿ, ಅಶ್ವ ಸರಣಿ, ಹಂಸ ಸರಣಿ ಇತ್ಯಾದಿ ರಚನೆಗಳಿಂದ ಪ್ರಸಿದ್ಧರೆನಿಸಿ ‘ಮೆಟಲ್ ಮ್ಯಾನ್ ಆಫ್ ಇಂಡಿಯಾ’ ಬಿರುದನ್ನು ಪಡೆದಿದ್ದರು.

ಮರದ ಉಬ್ಬುಶಿಲ್ಪಗಳ ವಿಶಿಷ್ಟ ಕಲಾರಚನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದ ಶೆಟ್ಟಿ, ತಮ್ಮ ಗಣೇಶ ಸರಣಿ, ಸೂರ್ಯ ಸರಣಿ, ಅಶ್ವ ಸರಣಿ, ಹಂಸ ಸರಣಿ ಇತ್ಯಾದಿ ರಚನೆಗಳಿಂದ ಪ್ರಸಿದ್ಧರೆನಿಸಿ ‘ಮೆಟಲ್ ಮ್ಯಾನ್ ಆಫ್ ಇಂಡಿಯಾ’ ಬಿರುದನ್ನು ಪಡೆದಿ ದ್ದರು. ಎಂಬತ್ತರ ದಶಕದಲ್ಲಿ ಉಡುಪಿಯಿಂದ ಮುಂಬೈಗೆ ಬಂದಿದ್ದ ಅವರು ಆರಂಭದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಬಳಿಕ ಪೂರ್ಣಕಾಲಿಕ ಚಿತ್ರಕಲಾ ರಚನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರನ್ನು ‘ದಾರ್ಶನಿಕ ಚಿತ್ರ ಕಾವಿದ’ ಎಂದೂ ಕರೆಯಲಾಗುತ್ತಿತ್ತು.

ಐದು ವರ್ಷಗಳ ಹಿಂದೆ ಪಂಚಮಹಾಭೂತಗಳ ತತ್ವಗಳಡಿ ಕಲಾ ರಚನೆ ಮಾಡಿದ್ದು, ಕಳೆದ ವರ್ಷದಿಂದ ‘ಶಿವಶಕ್ತಿ ಸರಣಿ’ಯ ಹೊಸ ಕಲಾರಚನೆಗಳ ಮೂಲಕ ಎಲ್ಲರ ಗಮನಸೆಳೆದಿದ್ದರು. ದೇಶವಿದೇಶಗಳಲ್ಲಿ ಇವರು ತಮ್ಮ ಕಲಾ ಪ್ರದರ್ಶನಗಳನ್ನು ನಡೆಸಿ ಪ್ರಶಂಸೆ, ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ಕರ್ನಾಟಕ ಸಂಘ ಮುಂಬಯಿ ಇವರಿಗೆ ‘ಸಾಧನಾ ಶಿಖರ ಪ್ರಶಸ್ತಿ’ ಪ್ರದಾನಿಸಿದ್ದರೆ, ಇತ್ತೀಚೆಗಷ್ಟೇ ಮುಂಬಯಿ ವಿವಿ ಕನ್ನಡದ ವಿಭಾ ಗ ಸ್ವರ್ಣಪದಕ ನೀಡಿ ಗೌರವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News