ಕಲಾಬಾಗಿಲು : ಬುರೂಜ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ
Update: 2020-09-05 16:55 IST
ವಿಟ್ಲ : ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾಹ್ ಮಾತನಾಡಿ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಹಾಗೂ ಶಿಕ್ಷಕರಿಗೆ ಸಹಕರಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು. ಶಾಲಾ ವ್ಯವಸ್ಥಾಪಕಿ ಅಸ್ಮಾ ಶಾಲೆಯ ಎಲ್ಲಾ ಶಿಕ್ಷಕಿಯರನ್ನು ಸನ್ಮಾನಿಸಿದರು.
ಶಿಕ್ಷಕಿಯರಾದ ಚೇತನಾ, ಎಲ್ಸಿ ಲಸ್ರಾದೋ, ಶೋಭ, ಶಾಲಿನಿ, ನೂರ್ ಜಹಾನ್, ಮಮತಾ ಆರ್, ವನಿತಾ ಶೆಟ್ಟಿ, ಚಂದ್ರಾವತಿ ಆರ್, ಅನ್ನಪೂರ್ಣೇಶ್ವರಿ, ನೀಲಮ್ಮ ಹಾಗೂ ಖುರ್ಷಿದ್ ಉಪಸ್ಥಿತರಿದ್ದರು.