×
Ad

ದ.ಕ.ಜಿಲ್ಲೆ : 377 ಮಂದಿಗೆ ಕೊರೋನ ಪಾಸಿಟಿವ್; 9 ಬಲಿ

Update: 2020-09-05 19:54 IST

ಮಂಗಳೂರು, ಸೆ. 5: ದ.ಕ.ಜಿಲ್ಲೆಯಲ್ಲಿ ಶನಿವಾರ 377 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 9 ಮಂದಿ ಬಲಿಯಾಗಿದ್ದಾರೆ.

ಶನಿವಾರ ಪಾಸಿಟಿವ್‌ಗೊಳಗಾದ 377 ಮಂದಿಯಲ್ಲಿ ಮಂಗಳೂರಿನ 192, ಬಂಟ್ವಾಳದ 45, ಪುತ್ತೂರಿನ 64, ಸುಳ್ಯದ 37, ಬೆಳ್ತಂಗಡಿಯ 20 ಮತ್ತು ಇತರ ಜಿಲ್ಲೆಯ 19 ಮಂದಿ ಸೇರಿದ್ದಾರೆ. ಶನಿವಾರ ವರದಿಯಾದ 377 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 14,600 ಮಂದಿಗೆ ಕೊರೋನ ಸೋಂಕು ತಗುಲಿದೆ.

ಮಂಗಳೂರು ತಾಲೂಕಿನ 3, ಬಂಟ್ವಾಳ, ಪುತ್ತೂರು, ಸುಳ್ಯದ ತಲಾ 1 ಮತ್ತು ಹೊರಜಿಲ್ಲೆಯ ಮೂವರ ಸಹಿತ ಜಿಲ್ಲೆಯಲ್ಲಿ ಶನಿವಾರ 9 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 400ಕ್ಕೇರಿದೆ.

ಈವರೆಗೆ ದ.ಕ.ಜಿಲ್ಲೆಯ 1,04,911 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 14,600 ಮಂದಿಯ ವರದಿ ಪಾಸಿಟಿವ್ ಮತ್ತು 90,311 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಶನಿವಾರ 311 ಮಂದಿ ಕೊರೋನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅದರಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 193 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 118 ಮಂದಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 11,239ಕ್ಕೇರಿದೆ. ಜಿಲ್ಲೆಯಲ್ಲಿ 2,961 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News