‘ಮುಚ್ಚಿಟ್ಟ ದಲಿತ ಚರಿತ್ರೆ’ ಪುಸ್ತಕ ಬಿಡುಗಡೆ
ಉಡುಪಿ, ಸೆ.5: ಲೇಖಕ ರಾಕೇಶ್ ಶೆಟ್ಟಿ ಅವರ ‘ಮುಚ್ಚಿಟ್ಟ ದಲಿತ ಚರಿತ್ರೆ’ ಪುಸ್ತಕವನ್ನು ಪತ್ರಕರ್ತ ಗುರುವಪ್ಪ ಬಾಳೆಪುಣಿ ಶನಿವಾರ ಅಂಬಲ ಪಾಡಿಯ ಕಾರ್ತಿಕ್ ಎಸ್ಟೇಟ್‌ನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸರಿ ಸಮಾನವಾಗಿ ದಲಿತರ ಪರ ಧ್ವನಿಯಾಗಿ ಜೋಗೇಂದ್ರನಾಥ ಬಹಳ ಹಿಂದೆ ಹೋರಾಟವನ್ನು ಮಾಡಿದ್ದರು. ಆದರೆ ಅವರ ಬಗ್ಗೆ ಇತಿಹಾಸದಲ್ಲಿ ಯಾವುದೇ ಉಲ್ಲೇಖ ಇಲ್ಲ ಎಂದು ಹೇಳಿರು.
ಲೇಖಕ ರಾಕೇಶ್ ಶೆಟ್ಟಿ ಮಾತನಾಡಿ, ಜೋಗೇಂದ್ರನಾಥ್ ದಲಿತ ಪರ ಹೋರಾಟಗಾರ. ಆದರೆ ಕೆಲವು ಪ್ರಭಾವಶಾಲಿಗಳ ಹುನ್ನಾರದಿಂದ ಇತಿಹಾಸ ಅವರನ್ನು ಮರೆತಂತೆ ನಟಿಸುತ್ತಿದೆ. ದಲಿತರ ಮೇಲಾಗುವ ದೌರ್ಜನ್ಯದ ವಿರುದ್ಧ ಬಹಳ ಹಿಂದೆಯೆ ಧ್ವನಿಯನ್ನು ಎತ್ತಿದ್ದರು ಎಂದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಉದ್ಘಾಟಿಸಿದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಶೆಟ್ಟಿ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.