ಅಮಾಸೆಬೈಲು: ಅಕ್ರಮ ಸಾಗಾಟದ 30 ಕೋಣಗಳು ವಶ ; ನಾಲ್ವರ ಬಂಧನ
Update: 2020-09-05 21:42 IST
ಅಮಾಸೆಬೈಲು, ಸೆ. 5: ಲಾರಿಯಲ್ಲಿ ಅಕ್ರಮವಾಗಿ 30 ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಅಮಾಸೆಬೈಲು ಪೊಲೀಸರು ಹೊಸಂಗಡಿ ಚೆಕ್‌ಪೋಸ್ಟ್ ಬಳಿ ಶನಿವಾರ ಬಂಧಿಸಿದ್ದಾರೆ.
ಹರಿಯಾಣ ರಾಜ್ಯದ ಮಂಜಿತ್ ಸಿಂಗ್ (38), ರವಿಕುಮಾರ್ (25), ರಾಜಸ್ಥಾನದ ಪವಾನ್ ಕುಮಾರ್ (32), ಉತ್ತರ ಪ್ರದೇಶದ ಗುಲ್ವಾಂ (29) ಬಂಧಿತ ಆರೋಪಿಗಳು.
ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದ ಲಾರಿ ಯನ್ನು ಪೊಲೀಸರು ತಪಾಸಣೆ ಮಾಡುವಾಗ ಅದರಲ್ಲಿ ಸುಮಾರು 30 ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಲಾರಿ ಹಾಗೂ ಕೋಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.