ಅಕ್ರಮ ಗಾಂಜಾ ಮಾರಾಟ: ಮೂವರ ಬಂಧನ
Update: 2020-09-05 21:43 IST
ಕುಂದಾಪುರ, ಸೆ.5: ಕುಂಭಾಶಿ ಗ್ರಾಮದ ಬೀಜಾಡಿ-ವಕ್ವಾಡಿ ರಸ್ತೆಯಿಂದ ವಿನಾಯಕ ನಗರ ಕಡೆಗೆ ಹೋಗುವ ಮಣ್ಣು ರಸ್ತೆಯ ತಿರುವಿನಲ್ಲಿ ಸೆ.5ರಂದು ಬೆಳಗ್ಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಕುಂದಾ ಪುರ ಪೊಲೀಸರು ಬಂಧಿಸಿದ್ದಾರೆ.
ಕೋಟೇಶ್ವರ ಮಲ್ಲಣ್ಣನಹಿತ್ಲುವಿನ ಮೊಹಮ್ಮದ್ ಸಫಾನ್(32), ಬಜ್ಪೆ ಪೆರ್ಮುದೆಯ ಅಬ್ದುಲ್ ರೆಹಮಾನ್ ಮಿಯಾಜ್(21), ಮೂಡು ಗೋಪಾಡಿಯ ಮೊಹಮ್ಮದ್ ಅಮೀರ್ ಹುಸೇನ್(19) ಬಂಧಿತ ಆರೋಪಿ ಗಳು. ಬಂಧಿತರಿಂದ 6500ರೂ. ಮೌಲ್ಯದ ಸುಮಾರು 195 ಗ್ರಾಂ ಗಾಂಜಾ ಹಾಗೂ 30ಸಾವಿರ ರೂ. ವೌಲ್ಯದ ಎರಡು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.