ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ರಾಜ್ಯಾಧ್ಯಕ್ಷ ಭೇಟಿ
Update: 2020-09-05 21:52 IST
ಉಡುಪಿ, ಸೆ.5: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಇಂದು ಯುವಶಕ್ತಿ ಉಡುಪಿಯ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಿದ್ದೀಕ್ ತಲಪಾಡಿ ಅವರನ್ನು ಯುವಶಕ್ತಿ ರಾಜ್ಯ ಸಂಚಾಲಕ ಹಬೀಬ್ ಶಾಲು ಹೊದಿಸಿ ಹೂಗುಚ್ಛ ನೀಡಿ ಸ್ವಾಗತಿಸಿದರು. ರಾಜ್ಯ ಅಧ್ಯಕ್ಷ ಪ್ರಮೋದ್ ಉಚ್ಚಿಲ್, ಉಪಾದ್ಯಕ್ಷರಾದ ಬೆಳ್ಕಲೆ ಶರತ್ ಶೆಟ್ಟಿ, ಇಮ್ರಾನ್ ಕರಂಬಳ್ಳಿ, ವಿಕ್ಕಿ ಕ್ರಿಸ್ಟೊಪರ್, ಪ್ರಧಾನ ಕಾರ್ಯದರ್ಶಿ ಶಹೀದ್ ರಝಾ ಮತ್ತು ಸಜ್ಜನ್ ಶೆಟ್ಟಿ ಮತ್ತು ಅಜಯ್ ಕುಮಾರ್ ಕಪ್ಪೆಟ್ಟು ಹಾಗೂ ಸಿದ್ದಾರ್ಥ್ ಉಪಸ್ಥಿತರಿದ್ದರು.