ಮಸ್ಕತ್ : ಸೋಶಿಯಲ್ ಫೋರಮ್ ಒಮಾನ್ ನಿಂದ ರಕ್ತದಾನ ಶಿಬಿರ

Update: 2020-09-05 18:10 GMT

ಒಮಾನ್: ಸೋಶಿಯಲ್ ಫೋರಮ್ ಒಮಾನ್ ಇದರ ವತಿಯಿಂದ ಒಮಾನ್ ನ ವಿವಿಧ ನಗರಗಳಲ್ಲಿ ಬೃಹತ್ ರಕ್ತದಾನ ಶಿಬಿರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,  ಸೆ.4ರಂದು ಮಸ್ಕತ್ ನಲ್ಲಿ ಎರಡನೆ ಹಂತದ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ಮಸ್ಕತ್ ನ 'ರೂವಿ' 'ಅಲ್ ಮಾಸ ಹಾಲ್' ನಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವನ್ನು  ಶಿಬಿರದ ಉಸ್ತುವಾರಿ ಅನಸ್ ಅಹ್ಮದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಒಮಾನ್ ಕೇಂದ್ರ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿ ಜಮಾಲ್ ಮುಹಮ್ಮದ್ ರಕ್ತದಾನದ ಮಹತ್ವದದ ಬಗ್ಗೆ ಮಾಹಿತಿ ನೀಡಿದರು.

ಸುಮಾರು 200ಕ್ಕೂ ಅಧಿಕ ಅನಿವಾಸಿ ಭಾರತೀಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಕೋವಿಡ್ ನ ಸಂದಿಗ್ಧತೆಯಲ್ಲಿ ಒಮಾನ್ ಆರೋಗ್ಯ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿನ ರಕ್ತದ ಅಭಾವವನ್ನು ಮನಗಂಡು   ಸೋಶಿಯಲ್ ಫೋರಮ್ ಒಮಾನ್  ಮತ್ತು ಒಮಾನ್ ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ "ರಕ್ತದಾನ ಮಾಡಿ ಜೀವ ಉಳಿಸಿ" ಎಂಬ ಶೀರ್ಷಿಕೆಯಡಿ ರಕ್ತದಾನ ಶಿಬಿರ ಅಭಿಯಾನವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಸಲಾಲ ನಗರದಲ್ಲಿಯೂ ರಕ್ತದಾನ ಶಿಬಿರ ನಡೆದಿದ್ದು,  100 ರಷ್ಟು ಅನಿವಾಸಿ ಭಾರತೀಯರು ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News